ದೇಶ

ನೊಬೆಲ್ ಗಳಿಸಲು .. ವಿದೇಶಿ ಮಹಿಳೆಯನ್ನು 2ನೇ ವಿವಾಹವಾಗಬೇಕು; ಬಿಜೆಪಿ ನಾಯಕನ ಅನುಚಿತ ಹೇಳಿಕೆ

Srinivas Rao BV

ಕೊಲ್ಕತ್ತಾ: ಅನಿವಾಸಿ ಭಾರತೀಯ ಅಭಿಜಿತ್ ಬ್ಯಾನರ್ಜಿ ಅವರಿಗೆ ಅರ್ಥಶಾಸ್ತ್ರದಲ್ಲಿ ಈ ಬಾರಿಯ ನೊಬೆಲ್ ಪ್ರಶಸ್ತಿ ನೀಡಲಾಗಿದೆ. ಅಭಿಜಿತ್, ಪತ್ನಿ ಎಸ್ತರ್ ಡುಫ್ಲೋ ಅವರೊಂದಿಗೆ ನೊಬೆಲ್ ಪುರಸ್ಕಾರ ಹಂಚಿಕೊಳ್ಳಲಿದ್ದಾರೆ. ಎಸ್ತರ್ ಡುಪ್ಲೋ ವಿದೇಶಿ ಮಹಿಳೆ, ಜೊತೆಗೆ ಅಭಿಜಿತ್ ಅವರ ಎರಡನೇ ಪತ್ನಿ. ಈ ಕುರಿತು ಪಶ್ಚಿಮ ಬಂಗಾಳ ರಾಜ್ಯ ಬಿಜೆಪಿ ಅಧ್ಯಕ್ಷ ರಾಹುಲ್ ಸಿನ್ಹಾ ಕೀಳು ಅಭಿರುಚಿಯ ಹೇಳಿಕೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ರಾಹುಲ್ ಮಾತನಾಡಿ, “ನೊಬೆಲ್ ಪ್ರಶಸ್ತಿ ಗೆಲ್ಲಬೇಕಾದರೆ, ವಿದೇಶಿ ಮಹಿಳೆಯನ್ನು ಎರಡನೇ ಮದುವೆಯಾಗಬೇಕು. ತಮಗೆ, ಈ ವಿಷಯ ಗೊತ್ತಿರಲಿಲ್ಲ ಎಂದು ವಿವಾದಾಸ್ಪದ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಅಭಿಜಿತ್ ಎಡಪಂಥೀಯ ಎಂಬ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರ ಹೇಳಿಕೆಯನ್ನು ರಾಹುಲ್ ಸಿನ್ಹಾ ಸಮರ್ಥಿಸಿಕೊಂಡಿದ್ದಾರೆ. ಎಡಪಂಥೀಯರ ಸೋಗಿನಲ್ಲಿ ಕೆಲವರು ದೇಶದ ಆರ್ಥಿಕತೆಯನ್ನು ಭ್ರಷ್ಟಗೊಳಿಸಿದ್ದರು. ವಾಮಪಕ್ಷಗಳ ತತ್ವ ಸಿದ್ಧಾಂತದಲ್ಲೇ ಆರ್ಥ ವ್ಯವಸ್ಥೆ ಚಲಿಸಬೇಕೆಂದು ಅವರು ಬಯಸಿದ್ದರು. ಆದರೆ, ಈಗ ದೇಶದಲ್ಲಿ ಎಡಪಂಥೀಯ ಸಿದ್ಧಾಂತಗಳ ಬಗ್ಗೆ ಯಾರೂ ಕಾಳಜಿ ವಹಿಸುವುದಿಲ್ಲ ಎಂದು ಲೇವಡಿ ಮಾಡಿದ್ದಾರೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ನ್ಯಾಯ್ ಯೋಜನೆ ರೂಪಿಸಿದವರಲ್ಲಿ ಅಭಿಜಿತ್ ಕೂಡಾ ಒಬ್ಬರಾಗಿದ್ದ ಕಾರಣ ಬಿಜೆಪಿ ಇಂತಹ ಅನುಚಿತ ಹೇಳಿಕೆಗಳನ್ನು ನೀಡುತ್ತಿದೆ.

SCROLL FOR NEXT