ದೇಶ

6 ಗಂಟೆಯವರೆಗೂ ಮಹಾರಾಷ್ಟ್ರದಲ್ಲಿ ಶೇ. 55, ಹರಿಯಾಣದಲ್ಲಿ ಶೇ. 63ರಷ್ಟು ಮತದಾನ

Nagaraja AB

ನವದೆಹಲಿ: ಮಿನಿ ಮಹಾಸಮರ ಎಂದೇ ಪರಿಗಣಿಸಲಾಗಿರುವ ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭಾ ಮತದಾನ ಸೂರ್ಯ ನೆತ್ತಿ ಮೇಲೆ ಬರುತ್ತಿದ್ದಂತೆ ಚುರುಕುಗೊಂಡಿದ್ದು, ಬಾಲಿವುಡ್ ನಟ, ನಟಿಯರು, ರಾಜಕೀಯ ಮುಖಂಡರು ಮತಗಟ್ಟೆಗಳ ಬಳಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. 

ಸಂಜೆ 6 ಗಂಟೆಯವರೆಗೂ ಮಹಾರಾಷ್ಟ್ರದಲ್ಲಿ  ಶೇ. 55ರಷ್ಟು ಹಾಗೂ ಹರಿಯಾಣದಲ್ಲಿ ಶೇ. 63ರಷ್ಟು ಮತದಾನವಾಗಿರುವ  ಬಗ್ಗೆ ಚುನಾವಣಾ ಆಯೋಗದ  ಅಧಿಕಾರಿಗಳು ತಿಳಿಸಿದ್ದಾರೆ. 

ಕ್ರಿಕೆಟ್  ದಂತಕಥೆ ಸಚಿನ್ ತೆಂಡೊಲ್ಕರ್, ಬಾಲಿವುಡ್ ನಟ ಅಮಿರ್ ಖಾನ್, ನಟಿ ಮಾಧುರಿ ಧೀಕ್ಷಿತ್, ರವಿಕಿಶನ್   ಮತ್ತಿತರರು ತಮ್ಮ ಕುಟುಂಬ ಸದಸ್ಯರೊಂದಿಗೆ ಬಾಂದ್ರಾದಲ್ಲಿ  ತಮ್ಮ ಹಕ್ಕು ಚಲಾಯಿಸಿದರು.  

ಕೇಂದ್ರ ಸಚಿವರಾದ  ಸ್ಮೃತಿ ಇರಾನಿ,  ನಿತಿನ್ ಗಡ್ಕರಿ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್,  ಆರ್ ಎಸ್ ಎಸ್ ಸರಸಂಘ ಸಂಚಾಲಕ ಮೋಹನ್ ಭಾಗವತ್ ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಅವರ ಪತ್ನಿ ನಾಗ್ಪುರದಲ್ಲಿ ತಮ್ಮ ಹಕ್ಕು ಚಲಾಯಿಸಿದರು.ಎನ್ ಸಿಪಿ ಮುಖಂಡರಾದ ಅಜಿತ್ ಪವಾರ್, ಫ್ರುಪುಲ್ ಪುಟೇಲ್ ಹಾಗೂ ಸುಪ್ರೀಯಾ ಸುಳೆ ತಮ್ಮ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತ ಚಲಾಯಿಸಿದರು. 

ಹರಿಯಾಣದ 90 ವಿಧಾನಸಭೆ ಹಾಗೂ ಮಹಾರಾಷ್ಟ್ರದ 288 ಸ್ಥಾನಗಳಿಗೆ  ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಯವರೆಗೂ ಮುಂದುವರೆಯಲಿದೆ. ಅಕ್ಟೋಬರ್ 24 ರಂದು ಮತಗಳ ಎಣಿಕೆ ನಡೆಯಲಿದೆ. ಮತಗಟ್ಟೆಗಳ ಬಳಿ  ಬಿಗಿ ಬಂಧೋಬಸ್ತ್ ಏರ್ಪಡಿಸಲಾಗಿದೆ. 

SCROLL FOR NEXT