ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಮತದಾನೋತ್ತರ ಸಮೀಕ್ಷೆ: ಮಹಾರಾಷ್ಟ್ರ, ಹರಿಯಾಣದಲ್ಲಿ ಬಿಜೆಪಿಗೆ ಪಟ್ಟ

ಇಂದು ನಡೆದ ಮಹಾರಾಷ್ಟ್ರ, ಹರಿಯಾಣ ವಿಧಾನಸಭೆ ಚುನಾವಣೆಗಳಲ್ಲಿ ಎರಡೂ ರಾಜ್ಯಗಳಲ್ಲಿ ಕೇಸರಿ ಪಕ್ಷ ಬಿಜೆಪಿ ಜಯಭೇರಿ ಬಾರಿಸಲಿರುವುದು ಖಚಿತವೆಂದು ಸಮೀಕ್ಷೆಗಳು ಹೇಳೂತ್ತಿದೆ.

ಸಂಗ್ರಹ ಚಿತ್ರ
Raghavendra Adiga
Updated On : 21 Oct 2019, 7:52 pm

ನವದೆಹಲಿ: ಇಂದು ನಡೆದ ಮಹಾರಾಷ್ಟ್ರ, ಹರಿಯಾಣ ವಿಧಾನಸಭೆ ಚುನಾವಣೆಗಳಲ್ಲಿ ಎರಡೂ ರಾಜ್ಯಗಳಲ್ಲಿ ಕೇಸರಿ ಪಕ್ಷ ಬಿಜೆಪಿ ಜಯಭೇರಿ ಬಾರಿಸಲಿರುವುದು ಖಚಿತವೆಂದು ಸಮೀಕ್ಷೆಗಳು ಹೇಳೂತ್ತಿದೆ. ಚುನಾವಣೆ ಮತದಾನದ ನಂತರ ಬಿಡುಗಡೆಯಾಗಿರುವ ಎಲ್ಲಾ ಪ್ರಮುಖ ಎಕ್ಸಿಟ್ ಪೋಲ್ ಸಮೀಕ್ಷೆಗಳಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ ಗೆಲುವು ಕಾಣಲಿದೆ ಎಂದು ಹೇಳಿದೆ.

ಸಂಜೆ 6 ಗಂಟೆಗೆ ಮತದಾನ ಮುಕ್ತಾಯವಾದಾಗ ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಕ್ರಮವಾಗಿ ಶೇ.60.05 ಹಾಗೂ ಶೇ. 65ರಷ್ಟು  ಮತದಾನವಾಗಿದೆ.

ಪ್ರಮುಖ ಎಕ್ಸಿಟ್ ಪೋಲ್ ಗಳ ವಿವರ ಹೀಗಿದೆ-

Advertisement

Advertisement

ಹರಿಯಾಣ-
ಟೈಮ್ಸ್ ನೌ

ಬಿಜೆಪಿ -71
ಕಾಂಗ್ರೆಸ್ -11
ಐಎನ್‌ಎಲ್‌ಡಿ + ಅಕಾಲಿದಳ -0
ಇತರರು -8

ಇಂಡಿಯಾ ನ್ಯೂಸ್-ಪೋಲ್‌ಸ್ಟ್ರಾಟ್

ಬಿಜೆಪಿ -75-80
ಕಾಂಗ್ರೆಸ್ -9-12
ಐಎನ್‌ಎಲ್‌ಡಿ + ಅಕಾಲಿದಳ -0-1
ಇತರರು -1-3

ನ್ಯೂಸ್ ಎಕ್ಸ್-ಪೋಲ್ಸ್ಟ್ರಾಟ್

ಬಿಜೆಪಿ -75-80
ಕಾಂಗ್ರೆಸ್ -9-12
ಐಎನ್‌ಎಲ್‌ಡಿ-ಅಕಾಲಿದಳ -0-1
ಇತರರು -1-3

ಮಹಾರಾಷ್ಟ್ರ
ಟೈಮ್ಸ್ ನೌ

ಬಿಜೆಪಿ ಶಿವಸೇನೆ - 230
ಕಾಂಗ್ರೆಸ್ ಎನ್‌ಸಿಪಿ - 48
ಇತರರು - 10

ಟಿವಿ 9 ಮರಾಠಿ-ಸಿಸೆರೊ

ಬಿಜೆಪಿ-ಶಿವಸೇನೆ --- 197
ಕಾಂಗ್ರೆಸ್ -ಎನ್‌ಸಿಪಿ - 75
ಇತರರು - 10

ಸಿಎನ್ಎನ್ ನ್ಯೂಸ್ 18-ಐಪಿಎಸ್ಒಎಸ್

ಬಿಜೆಪಿ ಶಿವಸೇನೆ - 243
ಕಾಂಗ್ರೆಸ್ ಎನ್‌ಸಿಪಿ - 41
ಇತರರು - 4

ಇಂಡಿಯಾ ಟುಡೆ-ಆಕ್ಸಿಸ್ ಮೈ ಇಂಡಿಯಾ

ಬಿಜೆಪಿ-ಶಿವಸೇನೆ - 166-194
ಕಾಂಗ್ರೆಸ್ -ಎನ್‌ಸಿಪಿ - 72-90
ಇತರರು - 22-34

ಹರಿಯಾಣದಲ್ಲಿ ಒಟ್ಟಾರೆ 90 ವಿಧಾನಸಭೆ ಕ್ಷೇತ್ರಗಳಿದ್ದು ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ಮೈತ್ರಿಕೂಟ ಪಟ್ಟಕ್ಕಾಗಿ ಹೋರಾಟ ನಡೆಸಿದೆ. ಇನ್ನು ಮಹಾರಾಷ್ಟ್ರದಲ್ಲಿ 288 ವಿಧಾನಸಭೆಗಳ ಪೈಕಿ ಬಿಜೆಪಿ 150 ಮೈತ್ರಿಪಕ್ಷ ಶಿವಸೇನೆ 124  ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಇನ್ನು ಕಾಂಗ್ರೆಸ್ 146 ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ 117 ಸ್ಥಾನಗಳಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದೆ.

ಎರಡೂ ರಾಜ್ಯಗಳ ವಿಧಾನಸಭೆ ಫಲಿತಾಂಶ  ಇದೇ ಅಕ್ಟೋಬರ್ 24 ರಂದು ಹೊರಬೀಳಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments