ದೇಶ

ಕೇರಳ ಉಪಚುನಾವಣೆ: ಮಳೆಯ ನಡುವೆ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭ!

Nagaraja AB

ತಿರುವನಂತಪುರಂ: ಕೇರಳದ ಐದು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಇಂದು ಬೆಳಗ್ಗೆಯಿಂದ ಮತದಾನ ಆರಂಭವಾಗಿದ್ದು, ಧಾರಾಕಾರ ಮಳೆಯ ನಡುವೆಯೂ ಮತದಾರರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

 ತವಟ್ಟಿಯೂರ್ಕವು ( ತಿರುವನಂತಪುರಂ)  ಅರೂರ್ ( ಅಲಾಪುಝಾ) ಕೊನ್ನಿ ( ಪಥನಮತಿತ್ತ)  ಎರ್ನಾಕುಲಂ ಮತ್ತು ಮಂಜೇಶ್ವರ ( ಕಾಸರಗೊಡು) ವಿಧಾನಸಭಾ ಕ್ಷೇತ್ರಗಳಲ್ಲಿ ಉಪ  ಚುನಾವಣೆ ನಡೆಯುತ್ತಿದ್ದು,  ಒಟ್ಟಾರೇ 9. 57 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಒಟ್ಟಾರೇ 896 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮಂಜೇಶ್ವರಂ ಹೊರತುಪಡಿಸಿದಂತೆ ಉಳಿದ ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ತೀವ್ರ ಮಳೆಯಾಗುತ್ತಿರುವ ಬಗ್ಗೆ ವರದಿಯಾಗಿದೆ.

ಉಪ ಚುನಾವಣೆ ನಡೆಯುತ್ತಿರುವ ಐದು ಕ್ಷೇತ್ರಗಳಲ್ಲಿ ಎಲ್ ಡಿಎಫ್ ನೇತೃತ್ವದ ಸಿಪಿಐ (ಎಂ) ಪ್ರತಿಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಹಾಗೂ ಬಿಜೆಪಿ ನಡುವೆ ತೀವ್ರ  ಪೈಪೋಟಿ ಕಂಡುಬಂದಿದೆ.  

SCROLL FOR NEXT