ದೇಶ

ಸಾಮಾಜಿಕ ತಾಣಗಳಿಗೆ ಆಧಾರ್ ಲಿಂಕ್: ಹೈಕೋರ್ಟ್ ನಲ್ಲಿನ ಅರ್ಜಿಗಳನ್ನು ಸುಪ್ರೀಂಗೆ ವರ್ಗಾಯಿಸಲು ನ್ಯಾಯಾಲಯ ಅನುಮತಿ

Raghavendra Adiga

ನವದೆಹಲಿ: ಫೇಸ್‌ಬುಕ್‌ನ ಮನವಿಯನ್ನು ಪುರಸ್ಕರಿಸಿರುವ ಸುಪ್ರೀಂ ಕೋರ್ಟ್  ಭಾರತದಲ್ಲಿ ಸಾಮಾಜಿಕ ಮಾಧ್ಯಮವನ್ನು ನಿಯಂತ್ರಿಸುವ ಮಾರ್ಗಸೂಚಿಗಳಿಗೆ ಸಂಬಂಧಿಸಿ ದೇಶದ ನಾನಾ ಹೈಕೋರ್ಟ್‌ಗಳಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ವರ್ಗಾಯಿಸಲು ಅನುಮತಿ ನೀಡಿದೆ.

ಮಧ್ಯವರ್ತಿಗಳ ಬಗ್ಗೆ ಕೇಂದ್ರವು ಹೊಸ ಮಾರ್ಗಸೂಚಿಗಳನ್ನು ರೂಪಿಸಿದ ನಂತರ ಜನವರಿಯಲ್ಲಿ ಈ ವಿಷಯವನ್ನು ಆಲಿಸಲಾಗುವುದು ಎಂದು ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ ಮತ್ತು ಅನಿರುದ್ಧ ಬೋಸ್ ಅವರ ನ್ಯಾಯಪೀಠ ಹೇಳಿದೆ.

ಸಾಮಾಜಿಕ ಮಾದ್ಯಮಗಳಿಗೆ ಸಂಬಂಧಿಸಿದಂತೆ ವಿವಿಧ ಹೈಕೋರ್ಟ್ ಗಳಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಗೆ ವರ್ಗಾಯಿಸಬೇಕೆಂದು ಫೇಸ್‌ಬುಕ್ ಮಾಡಿದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿತ್ತು. ಹೈಕೋರ್ಟ್‌ಗಳಿಂದ ಸಂಘರ್ಷಗಳ ತೀರ್ಮಾನ ಹೊರಬರುವ ಸಾಧ್ಯತೆ ಇದ್ದು ಪ್ರಕರಣಗಳ ವರ್ಗಾವಣೆಯು ನ್ಯಾಯದ ಹಿತಾಸಕ್ತಿಗಳನ್ನು ಒದಗಿಸಲಿದೆ ಎಂದು ಫೇಸ್‌ಬುಕ್ ಹೇಳಿದೆ. ಮದ್ರಾಸ್ ಹೈಕೋರ್ಟ್‌ನಲ್ಲಿ ಎರಡು ಮತ್ತು ಬಾಂಬೆ ಮತ್ತು ಮಧ್ಯಪ್ರದೇಶದ ಹೈಕೋರ್ಟ್‌ಗಳಲ್ಲಿ ತಲಾ ಒಂದು ಅರ್ಜಿಗಳನ್ನು ಸಲ್ಲಿಕೆ ಮಾಡಲಾಗಿದೆ ಎಂದು ಸಾಮಾಜಿಕ ಮಾದ್ಯಮಗಳ ದೈತ್ಯ ಸಂಸ್ಥೆ  ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಸಾಮಾಜಿಕ ಮಾದ್ಯಮ ಖಾತೆಗಳ ದೃಢೀಕರಣಕ್ಕೆ ಆಧಾರ್ ಅಥವಾ ಯಾವುದೇ ಸರ್ಕಾರಿ ಅಧಿಕೃತ ಗುರುತಿನ ಪುರಾವೆಗಳನ್ನು ಕಡ್ಡಾಯಗೊಳಿಸಬೇಕು ಎಂದು ಹೈಕೋರ್ಟ್‌ಗಳಲ್ಲಿನ ಎಲ್ಲಾ ಮನವಿಗಳನ್ನು ಸುಪ್ರೀಂ ಗೆ ವರ್ಗಾಯಿಸಿ ಎಂದು ಮನವಿಯಲ್ಲಿ ಹೇಳಲಾಗಿದೆ.

ಸಾಮಾಜಿಕ ಮಾಧ್ಯಮವನ್ನು ನಿಯಂತ್ರಿಸುವ ಕಾನೂನುಗಳಿಗೆ ಅಂತಿಮ ರ್ಪ ಕೊಡುವ ಪ್ರಕ್ರಿಯೆಯು 2020 ರ ಜನವರಿಯೊಳಗೆ ಪೂರ್ಣಗೊಳ್ಳಲಿದೆ ಎಂದು ಕೇಂದ್ರವು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿತು ಮತ್ತು ಕಾನೂನಿಗೆ ಅನುಸಾರವಾಗಿ ಅಂತಿಮ ಪರಿಷ್ಕೃತ ನಿಯಮಗಳನ್ನು ತಿಳಿಸಲು ಮೂರು ತಿಂಗಳು ಹೆಚ್ಚಿನ ಸಮಯವನ್ನು ಕೋರಿತು.

SCROLL FOR NEXT