ದೇಶ

ಐಎಎಸ್ ಅಧಿಕಾರಿಗೇ 6.10 ಲಕ್ಷರೂಪಾಯಿ ವಂಚನೆ! 

Srinivas Rao BV

ಉದಯ್ ಪುರ: ಐಎಎಸ್ ಅಧಿಕಾರಿಯೊಬ್ಬರು ಸೈಬರ್ ವಂಚಕನ ಬಲೆಗೆ ಬಿದ್ದು ಬರೊಬ್ಬರಿ 6.10 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಉದಯ್ ಪುರದಲ್ಲಿ ಈ ಘಟನೆ ನಡೆದಿದ್ದು, ವಂಚಕ ಐಎಎಸ್ ಅಧಿಕಾರಿಗೆ ನಕಲಿ ಕೆವೈಸಿ( Know your customer) ಲಿಂಕ್ ಕಳಿಸಿ ಬ್ಯಾಂಕ್ ಖಾತೆಯಿಂದ ಹಣ ದೋಚಿದ್ದಾನೆ. 

ರಾಜಸ್ಥಾನದ ಉದಯ್ ಪುರ ಜಿಲ್ಲೆಯ ಝಾಡೋಲ್ ನ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಟಿ ಶುಭಮಂಗಳ ವಂಚನೆಗೆ ಒಳಗಾದ ಅಧಿಕಾರಿಯಾಗಿದ್ದಾರೆ.  ಈ ಅಧಿಕಾರಿಯ ಮೊಬೈಲ್ ಗೆ ಅ.21 ರಂದು ಮೆಸೇಜ್ ಮೂಲಕ ಲಿಂಕ್ ಬಂದಿತ್ತು. ಎಸ್ ಬಿಐ ಬ್ಯಾಂಕ್ ನಿಂದ ಬಂದಿದ್ದ ಕೆ.ವೈಸಿಯನ್ನು ತುಂಬಿದ್ದಾರೆ. ತಕ್ಷಣವೇ  ಮೂರು ಪ್ರತ್ಯೇಕ ವಹಿವಾಟಿನಲ್ಲಿ 6.10 ಲಕ್ಷ ರೂಪಾಯಿ ಖಾತೆಯಿಂದ ತೆಗೆಯಲಾಗಿದೆ ಎಂದು ಮೆಸೇಜ್ ಬಂದಿದೆ. 

ತಕ್ಷಣವೇ ಪೊಲೀಸರಿಗೆ ದೂರು ನೀಡಿದರಾದರೂ ಬ್ಯಾಂಕ್ ಖಾತೆ ಬೆಂಗಳೂರಿನಲ್ಲಿದ್ದರಿಂದ ಸೈಬರ್ ಸೆಲ್ ನಲ್ಲಿ ದೂರು ದಾಖಲಿಸಿದ್ದಾರೆ. ಈ ರೀತಿ ಯಾರಿಗೆ ಬೇಕಾದರೂ ಆಗಬಹುದು, ವೈಯಕ್ತಿಕ ಮಾಹಿತಿಯನ್ನು ಸೈಬರ್ ವಂಚನೆಗಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇವುಗಳನ್ನು ತಡೆಯಲು  ಒಂದಷ್ಟು ನಿಯಮಗಳನ್ನು ರೂಪಿಸಿ, ಇಂತಹ ಪ್ರಕರಣಗಳನ್ನು ನಿರ್ವಹಿಸುವುದಕ್ಕಾಗಿಯೇ ಪೊಲೀಸರಿಗೆ ತರಬೇತಿ ನೀಡಬೇಕು ಎಂದು ಅಧಿಕಾರಿ ಅಭಿಪ್ರಾಯಪಟ್ಟಿದ್ದಾರೆ. 

SCROLL FOR NEXT