ದೇಶ

ಕೇರಳ ಉಪ ಚುನಾವಣೆ: ಐದು ಕ್ಷೇತ್ರಗಳ ಪೈಕಿ 3ರಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಜಯಭೇರಿ!

Nagaraja AB

ತಿರುವನಂತಪುರಂ: ಕೇರಳದ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೂರು ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ಇನ್ನೂ ಉಳಿದ ಎರಡು ಕ್ಷೇತ್ರಗಳನ್ನು  ಆಡಳಿತರೂಢ ಎಲ್ ಡಿಎಫ್  ತನ್ನ ತೆಕ್ಕೆಗೆ ತೆಗೆದುಕೊಂಡಿದೆ. 

ಆದರೆ, ಸಿಪಿಎಂ ನೇತೃತ್ವದ ಎಡರಂಗ ಯುಡಿಎಫ್ ನಿಂದ ಒಂದು ಕ್ಷೇತ್ರವನ್ನು ಕಸಿದುಕೊಂಡಿದ್ದು,  ತನ್ನ ಸದಸ್ಯ ಬಲವನ್ನು 93ಕ್ಕೆ ಏರಿಸಿಕೊಂಡಿದೆ. ಯುಡಿಎಫ್ ಸದಸ್ಯ ಬಲ 47ರಿಂದ 45 ಆಗಿದೆ. 

2016ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದ ಕೊನ್ನಿ, ವಟ್ಟಿಯೂರ್ ಕಾವು ಕ್ಷೇತ್ರ  ಈ ಬಾರಿ ಎಲ್ ಡಿಎಫ್ ಪಾಲಾಗಿದೆ. ಸಿಪಿಎಂ ಇದೇ ಬಾರಿಗೆ ವಟ್ಟಿಯೂರು ಕಾವು ಕ್ಷೇತ್ರದಲ್ಲಿ ಎರಡು ದಶಕಗಳ ಬಳಿಕ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. 

ಮೂವರು ಕಾಂಗ್ರೆಸ್ ಹಾಗೂ ಒಬ್ಬರು ಸಿಪಿಎಂ ಅಭ್ಯರ್ಥಿಗಳು ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು ಹಾಗೂ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಯುಡಿಎಫ್ ಜೊತೆಗೆ ಗುರುತಿಸಿಕೊಂಡಿದ್ದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಕ್ಷದ ಶಾಸಕ ಮೃತಪಟ್ಟಿದ್ದರಿಂದ ಇದೇ ತಿಂಗಳ 21 ರಂದು ಈ ಕ್ಷೇತ್ರಗಳಲ್ಲಿ  ಉಪ ಚುನಾವಣೆ ನಡೆದಿತ್ತು. 

SCROLL FOR NEXT