ದೇಶ

ಅಧಿಕಾರಕ್ಕಾಗಿ ಶಿವಸೇನೆಯೊಂದಿಗೆ ಹೋಗಲ್ಲ- ಶರದ್ ಪವಾರ್ 

Nagaraja AB

ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ- ಶಿವಸೇನಾ ಅಧಿಕಾರ ರಚಿಸುವುದು ಬಹುತೇಕ ಖಚಿತ ಆಗಿದ್ದರೂ ಶಿವಸೇನಾ ಜೊತೆಗೆ ಅಧಿಕಾರಕ್ಕಾಗಿ ಹೋಗಲ್ಲ ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.

ಶಿವಸೇನೆಯ ಬೆಂಬಲಿಸುವ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದೇವೆ. ಅವರಿಗೆ ಮಾತ್ರ ಬೆಂಬಲಿಸುತ್ತೇವೆ. ಇದು ನಮ್ಮ ದೃಢ ನಿರ್ಧಾರವಾಗಿದೆ ಎಂದು ಸುದ್ದಿಗಾರರಿಗೆ ಅವರು ತಿಳಿಸಿದ್ದಾರೆ.

ಯಾವುದೇ ಕಾರಣಕ್ಕೂ ಶಿವಸೇನೆ ಜೊತೆಗೆ ಹೋಗುವುದಿಲ್ಲ, ಎನ್ ಸಿಪಿ, ಕಾಂಗ್ರೆಸ್ , ಇನ್ನಿತರ ಮೈತ್ರಿ ಪಕ್ಷಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಮಹಾರಾಷ್ಟ್ರದಲ್ಲಿ ಬಿಜೆಪಿ 99 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, 4 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ, ಶಿವಸೇನಾ 56 ಸ್ಥಾನಗಳನ್ನು ಗೆದ್ದು ಮೂರು ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಎನ್ ಸಿಪಿ 55  ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಅಧಿಕೃತ ಫಲಿತಾಂಶ  ಪ್ರಕಟವಾಗುವವರೆಗೂ ಏನನ್ನೂ ಹೇಳಲು ಸಾಧ್ಯವಿಲ್ಲ. ಈಗಿನ ಅಂಕಿಅಂಶಗಳನ್ನು ಗಮನಿಸಿದರೆ ಬಿಜೆಪಿ - ಶಿವಸೇನೆಯನ್ನು ಜನರು ತಿರಸ್ಕರಿಸುವುದು ಸ್ಪಷ್ಪವಾಗಿದೆ ಎಂದಿದ್ದಾರೆ.

SCROLL FOR NEXT