ದೇಶ

ಜಮ್ಮು ಕಾಶ್ಮೀರ, ಲಡಾಖ್ ಗೆ ನೂತನ ಲೆ. ಗವರ್ನರ್ ನೇಮಕ, ಮಲಿಕ್ ಗೋವಾಗೆ ವರ್ಗಾವಣೆ

Raghavendra Adiga

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ನೂತನ ಕೇಂದ್ರಾಡಳಿತ ಪ್ರದೇಶಗಳಾಗಲಿರುವ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಗಳಿಗೆ ಹೊಸ ಲೆಫ್ಟಿನೆಂಟ್ ಗವರ್ನರ್ ಗಳ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.ಐಎಎಸ್ ಅಧಿಕಾರಿಗಳಾದ ಗಿರೀಶ್ ಚಂದ್ರ ಮುರ್ಮು ಹಾಗೂ ಆರ್ ಕೆ ಮಾಥುರ್ ಅವರನ್ನು ಕ್ರಮವಾಗಿ ಜಮ್ಮು-ಕಾಶ್ಮೀರ ಮತ್ತು ಲಡಾಖ್ ನ ಹೊಸ ಲೆಫ್ಟಿನೆಂಟ್ ಗವರ್ನರ್ಗಳಾಗಿ ನೇಮಕ ಮಾಡಲಾಗಿದೆ ಎಂದು ಅಧಿಕೃತ ಹೇಳಿಕೆ ಉಲ್ಲೇಖಿಸಿದೆ.

1985ರ ಬ್ಯಾಚ್‌ನ ಗುಜರಾತ್ ಕೇಡರ್ ಅಧಿಕಾರಿಯಾಗಿದ್ದ ಮುರ್ಮುಕೇಂದ್ರ ಹಣಕಾಸು ಸಚಿವಾಲಯದಲ್ಲಿ ಎಕ್ಸ್ಪೆಂಡಿಚರ್ ಸೆಕ್ರೆಟರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೆ, 1977 ರ ಬ್ಯಾಚ್ ಅಧಿಕಾರಿಯಾಗಿದ್ದ ಮಾಥುರ್ ಅವರು ರಕ್ಷಣಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದು ಇವರು ಮಾಜಿ  ಮುಖ್ಯ ಮಾಹಿತಿ ಆಯುಕ್ತರಾಗಿಯೂ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ರಾಜ್ಯದ ಪ್ರಸ್ತುತ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಅವರನ್ನು ಗೋವಾಗೆ ವರ್ಗಾವಣೆ ಮಾಡಲಾಗಿದೆ ಎಂದು ರಾಷ್ಟ್ರಪತಿ ಭವನ ಹೇಳಿಕೆ ತಿಳಿಸಿದೆ

ಅಕ್ಟೋಬರ್ 31 ರಂದು ಎರಡು ಕೇಂದ್ರಾಡಳಿತ ಪ್ರದೇಶಗಳು ಅಸ್ತಿತ್ವಕ್ಕೆ ಬರಲಿವೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ನೇ ವಿಧಿಯನ್ನು ಮೋದಿ ಸರ್ಕಾರ ಆಗಸ್ಟ್ 5 ರಂದು ರದ್ದುಗೊಳಿಸಿತ್ತು.

SCROLL FOR NEXT