ದೇಶ

ಹಬ್ಬದ ದಟ್ಟಣೆ ಕಡಿಮೆ ಮಾಡಲು ಭಾರತೀಯ ರೈಲ್ವೆಯಿಂದ 2,500 ಹೆಚ್ಚುವರಿ ಟ್ರಿಪ್

Lingaraj Badiger

ನವದೆಹಲಿ: ದೀಪಾವಳಿ ಹಾಗೂ ಕ್ರಿಸ್ ಮಸ್ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಲು ತೆರಳುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಭಾರತೀಯ ರೈಲ್ವೆ ದೇಶಾದ್ಯಂತ 400 ವಿಶೇಷ ರೈಲುಗಳ ಮೂಲಕ 2,500 ಹೆಚ್ಚುವರಿ ಟ್ರಿಪ್ ಗಳನ್ನು ಮಾಡಲು ನಿರ್ಧರಿಸಿದೆ.

ಹಬ್ಬದ ದಿನಗಳಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡುವುದಕ್ಕಾಗಿ ದುರ್ಗಾ ಪೂಜೆ ದಿನದಿಂದ ಕ್ರಿಸ್ ಮಸ್ ವರೆಗೆ 200 ಜೋಡಿ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ಅಲ್ಲದೆ ನಿತ್ಯದ ರೈಲಿಗಳಿಗೂ ಹೆಚ್ಚುವರಿ ಬೋಗಿಗಳನ್ನು ಅಳವಡಿಸಲಾಗುತ್ತಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಈ ವಿಶೇಷ ರೈಲುಗಳು ದೆಹಲಿ - ಪಾಟ್ನಾ, ದೆಹಲಿ - ಕೋಲ್ಕತಾ, ದೆಹಲಿ - ಮುಂಬೈ, ಮುಂಬೈ - ಲಖನೌ, ದೆಹಲಿ - ಛಾಪ್ರಾ ಸೇರಿದಂತೆ ದೇಶಾದ್ಯಂತ ಹಲವು ಪ್ರಮುಖ ಮಾರ್ಗಗಳಲ್ಲಿ ಸಂಚರಿಸಲಿವೆ. 

SCROLL FOR NEXT