ದೇಶ

ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದಲ್ಲಿ ವಿರುಷ್ಕಾ ಜೋಡಿ!

Nagaraja AB

ಮುಂಬೈ: ದೇಶದೆಲ್ಲೆಡೆ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಮನೆ ಮಾಡಿದೆ. ಅದರಂತೆ ಟೀಂ ಇಂಡಿಯಾ  ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಕೂಡಾ ಬೆಳಕಿನ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದ್ದಾರೆ. 

ಬಾಂಗ್ಲಾ ಸರಣಿಯಿಂದ ಹೊರಗುಳಿದಿರುವ ವಿರಾಟ್ ಕೊಹ್ಲಿ, ಇದೀಗ ತಮ್ಮ ಸಮಯವನ್ನು ಕುಟುಂಬದೊಂದಿಗೆ ಎಂಜಯ್ ಮಾಡುತ್ತಿದ್ದಾರೆ.

ಸಾಂಪ್ರಾದಾಯಿಕ ಡ್ರೆಸ್ ನಲ್ಲಿ ವಿರುಷ್ಕಾ ಜೋಡಿ ದೀಪಾವಳಿ ಹಬ್ಬ ಆಚರಿಸಿದೆ.  ಬಿಳಿ ಶರ್ಟ್ ಹಾಗೂ ಪ್ಯಾಂಟ್ ನೊಂದಿಗೆ ಕೊಹ್ಲಿ ಮಿಂಚುತ್ತಿದ್ದರೆ, ಅನುಷ್ಕಾ ಶರ್ಮಾ  ಪ್ರಾಚೀನ ಆಭರಣಗಳ ಕಲಾಕೃತಿಗಳನ್ನು ಹೊಂದಿರುವ ಲೆಹೆಂಗಾವನ್ನು ಧರಿಸಿದ್ದಾರೆ. 

ಈ  ಪೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿ, ದೀಪಾವಳಿ ಶುಭಾಶಯ ಕೋರಿದ್ದಾರೆ.  ಈ ಹಬ್ಬದ ದೀಪ ನಿಮ್ಮ ಬಾಳನ್ನೂ ಬೆಳಗಲಿ, ಜೊತೆಗೆ ಪ್ರತಿಯೊಬ್ಬರಿಗೂ ಪ್ರೀತಿ ಹಾಗೂ ಶಾಂತಿಯನ್ನು ತರಲಿ ಅಂತಾ ಬರೆದುಕೊಂಡಿದ್ದಾರೆ.

SCROLL FOR NEXT