ದೇಶ

ಕಾಶ್ಮೀರದಲ್ಲಿ ಮತ್ತೆ ಉಗ್ರ ಉಪಟಳ: ಪ. ಬಂಗಾಳದ ಐವರು ಕಾರ್ಮಿಕರ ಗುಂಡಿಕ್ಕಿ ಹತ್ಯೆ

Raghavendra Adiga

ಶ್ರೀನಗರ: ಪಶ್ಚಿಮ ಬಂಗಾಳದಿಂದ ಜಮ್ಮು ಕಾಶ್ಮೀರಕ್ಕೆ ವಲಸೆ ಬಂದಿದ್ದ ಐವರು ಕಾರ್ಮಿಕರನ್ನು ಮಂಗಳವಾರ ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೋರ್ವ ಕಾರ್ಮಿಕನಿಗೆ ತೀವ್ರ ಸ್ವರೂಪದ ಗಾಯಗಳಾಗಿದೆಎಂದು ಅವರು ಹೇಳಿದರು.ಸಂತ್ರಸ್ತರೆಲ್ಲರೂ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯವರು ಎಂದು ಪೊಲೀಸರು ತಿಳಿಸಿದ್ದಾರೆ.

ಆಗಸ್ಟ್‌ನಲ್ಲಿ ಸಂವಿಧಾನದ 370 ನೇ ವಿಧಿ (ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನಿಡುವ ವಿಧಿ) ರದ್ದಾದ ನಂತರ ಸ್ಥಳೀಯರೊಂದಿಗೆ ಮಾತನಾಡಲು ಮತ್ತು ಅವರ ಅನುಭವವನ್ನು ಅರಿಯಲು  ಯುರೋಪಿಯನ್ ಒಕ್ಕೂಟದ ಸಂಸದರ ನಿಯೋಗವು ಕಾಶ್ಮೀರಕ್ಕೆ ಭೇಟಿ ನೀಡಿದ ದಿನದಂದೇ ಈ ದಾಳಿ ನಡೆದಿದೆ.

370 ನೇ ವಿಧಿ ಬಗ್ಗೆ ಕೇಂದ್ರದ ನಿರ್ಧಾರದಿಂದ, ಭಯೋತ್ಪಾದಕರುಆಕ್ರೋಶಗೊಂಡಿದ್ದು ಟ್ರಕ್ಕುಗಳು, ಕೂಲಿ ಕಾರ್ಮಿಕರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದಾರೆ. ಈ ಟ್ರಕ್ ಚಾಲಕರು, ಕಾರ್ಮಿಕರು ದೇಶದ ಇತರೆ ಭಾಗಗಳಿಂದ ಕಾಶ್ಮೀರಕ್ಕೆ ಬಂದವರಿದ್ದಾರೆ. ನಿನ್ನೆ ಸೋಮವಾರದಂದು ಸೋಮವಾರ, ಉದಾಂಪುರ್ ಜಿಲ್ಲೆಯ ಟ್ರಕ್ ಚಾಲಕನೊಬ್ಬನನ್ನು ಅನಂತ್‌ನಾಗ್‌ನಲ್ಲಿ ಉಗ್ರರು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಗಸ್ಟ್ 5 ರಿಂದ ಉಗ್ರರು ಹತ್ಯೆಗೈದ ನಾಲ್ಕನೇ ಟ್ರಕ್ ಚಾಲಕ ಈತನಾಗಿದ್ದ.

SCROLL FOR NEXT