ಸಮಾಜದ ಏಳಿಗೆಗೆ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿ ಕೊಡುಗೆ : ನಿರ್ಮಲಾ ಸೀತಾರಾಮನ್ 
ದೇಶ

ಸಮಾಜದ ಏಳಿಗೆಗೆ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿ ಕೊಡುಗೆ : ನಿರ್ಮಲಾ ಸೀತಾರಾಮನ್

ಸಾಂಸ್ಥಿಕ  ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಕೇವಲ ನಿಧಿಯ ಕೊಡುಗೆಯಲ್ಲ, ಇದು  ಸಮಾಜದ ಸಮಗ್ರ ಅಭಿವೃದ್ದಿಗಾಗಿನ ಕೊಡುಗೆಯಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಅಭಿಪ್ರಾಯಪಟ್ಟಿದ್ದಾರೆ.

ನವದೆಹಲಿ: ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಕೇವಲ ನಿಧಿಯ ಕೊಡುಗೆಯಲ್ಲ, ಇದು  ಸಮಾಜದ ಸಮಗ್ರ ಅಭಿವೃದ್ದಿಗಾಗಿನ ಕೊಡುಗೆಯಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಅಭಿಪ್ರಾಯಪಟ್ಟಿದ್ದಾರೆ.

ಮೊದಲ ರಾಷ್ಟ್ರೀಯ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದ ಈಶಾನ್ಯ ಪ್ರದೇಶದ ಅಭಿವೃದ್ಧಿಗೆ ಕಂಪನಿಗಳು ಶ್ರಮಿಸಬೇಕು ಎಂದು ಒತ್ತಿ ಹೇಳಿದರು.

ಸಿಎಸ್ ಆರ್ ಗೆ ಕಾನೂನು ತೊಡಕಾಗದಂತೆ ಅದರ ಪ್ರಮುಖ ಮನೋಭಾವವನ್ನು ರಕ್ಷಿಸಲಾಗುವುದು ಎಂದೂ ಸಚಿವರು  ಉದ್ಯಮಗಳಿಗೆ ಭರವಸೆ ನೀಡಿದರು.ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ  ಕಂಪೆನಿಗಳು ಮುಂದೆ ಬಂದು ಸಾಮಾಜಿಕ ಜವಾಬ್ದಾರಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಒತ್ತಾಯಿಸುವುದಿಲ್ಲ.  ಸಿಎಸ್ಆರ್ ಚಟುವಟಿಕೆಗಳ ಕಾಫಿ ಟೇಬಲ್ ಪುಸ್ತಕವನ್ನು ಅವರು ಈ ಸಮಯದಲ್ಲಿ  ಬಿಡುಗಡೆ ಮಾಡಿ  ಪುಸ್ತಕದ ಮೊದಲ ಪ್ರತಿಯನ್ನು  ರಾಷ್ಟ್ರಪತಿ  ರಾಮ್ ನಾಥ್ ಕೋವಿಂದ್ ಅವರಿಗೆ ನೀಡಿದರು.

ನಂತರ ರಾಷ್ಟ್ರಪತಿ  ಕೋವಿಂದ್ ಅವರು ಎರಡು ವಿಭಾಗಗಳಲ್ಲಿ ವಿಜೇತ ಕಂಪನಿಗಳಿಗೆ ರಾಷ್ಟ್ರೀಯ ಪ್ರಶಸ್ತಿಗಳನ್ನು ವಿತರಿಸಿ ಮಾತನಾಡಿ,  ಸಮಾಜಕ್ಕೆ ನೀಡಿದ ಕೊಡುಗೆಗಾಗಿ  ಸಿಎಸ್ಆರ್ ಪ್ರಶಸ್ತಿ  ಪಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ. ಅದು ಮಹಾತ್ಮಾ ಗಾಂಧಿ ಅವರ ತತ್ವದ ಪಾಲನೆಯ ನಿಜವಾದ ಸಂಕೇತ ಎಂದು ಅಭಿಪ್ರಾಯಪಟ್ಟರು. ಈಗ ಸಿ ಎಸ್ ಆರ್ ಎನ್ನುವುದು ವ್ಯಾಪಾರದ ಸಮಗ್ರ ಭಾಗವಾಗಿದೆ. ಈ ಮೂಲಕ ಸಮಾಜದ ದುರ್ಬಲ ವರ್ಗವನ್ನು ನೇರವಾಗಿ ಸಂಪರ್ಕಿಸಿ ಅವರ ಪ್ರಗತಿಗೆ ನೆರವಾಗಬಹುದು ಎಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT