ದೇಶ

ಕುಲಭೂಷಣ್ ಜಾಧವ್ ಮೇಲೆ ಪಾಕಿಸ್ತಾನದ ಒತ್ತಡ: ಎಂಇಎ ಆರೋಪ

Nagaraja AB

ನವದೆಹಲಿ: ಪಾಕಿಸ್ತಾನದ ಬಂಧನದಲ್ಲಿರುವ ಭಾರತೀಯ ನೌಕಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನ ಸರ್ಕಾರ  ಅಂತಾರಾಷ್ಟ್ರೀಯ ನ್ಯಾಯಾಲಯದ ನಿರ್ದೇಶನದ ಮೇರೆಗೆ ರಾಯಭಾರಿ ಅಧಿಕಾರಿಗಳ ಪ್ರವೇಶವನ್ನು ನೀಡಿದೆ. ಆದರೆ, ಜಾಧವ್ ಮೇಲೆ ಪಾಕಿಸ್ತಾನ ಒಪ್ಪಲಾಗದ ಸುಳ್ಳು ಆರೋಪಗಳನ್ನು ಒಪ್ಪಿಕೊಳ್ಳುವಂತೆ ತೀವ್ರ ಒತ್ತಡವಿದೆ ಎಂದು ಭಾರತ ಆರೋಪಿಸಿದೆ.

ಇಸ್ಲಾಮಾಬಾದ್ ನ ಭಾರತದ ಉಪ ಕಮೀಷನರ್ ಅಹ್ಲುವಾಲಿಯಾ ಅವರಿಂದ ವಿವರವಾದ ವರದಿಯನ್ನು ಸ್ವೀಕರಿಸಿದ ನಂತರ ಮುಂದಿನ ಕ್ರಮವನ್ನು ನಾವು ನಿರ್ಧರಿಸುತ್ತೇವೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.

ಸಮಗ್ರ ವರದಿಯನ್ನು ಕಾಯುತ್ತಿರುವುದಾಗಿ ಹೇಳಿದ ಅವರು, ಪಾಕಿಸ್ತಾನದ ಅಸಮರ್ಥನೀಯ ಆರೋಪಗಳನ್ನು ಒಪ್ಪಿಕೊಳ್ಳುವ ಒತ್ತಡದಲ್ಲಿ ಜಾಧವ್ ಇದ್ದಾರೆ ಎಂದು ಅವರು ದೂರಿದ್ದಾರೆ.

SCROLL FOR NEXT