ದೇಶ

ಡಿ.ಕೆ ಶಿವಕುಮಾರ್ ನ್ನು 14 ದಿನಗಳ ವಶಕ್ಕೆ ಕೇಳಿದ ಇ.ಡಿ

Srinivas Rao BV

ಸರ್ಕಾರ ನಾಯಿ ಇದ್ದಂತೆ, ಇಡಿ ಅದರ ಬಾಲ: ಅಭಿಷೇಕ್ ಮನು ಸಿಂಘ್ವಿ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿ.ಕೆ ಶಿವಕುಮಾರ್ ಅವರನ್ನು 14 ದಿನಗಳ ಕಸ್ಟಡಿಗೆ ನೀಡಬೇಕೆಂದು ಜಾರಿ ನಿರ್ದೇಶನಾಲಯ ದೆಹಲಿ ಕೋರ್ಟ್ ಗೆ ಮನವಿ ಮಾಡಿದೆ. 

ಮಾಜಿ ಸಚಿವರ ವಿಚಾರಣೆ ಅಗತ್ಯವಿದ್ದು, 14 ದಿನಗಳ ವಶಕ್ಕೆ ನೀಡಬೇಕೆಂದು ಇಡಿ ವಾದ ಮಂಡಿಸಿದ್ದು, ದಾಖಲೆಗಳೊಂದಿಗೆ ವಿಚಾರಣೆ ನಡೆಸುವುದಾಗಿ ಹೇಳಿದೆ.ಡಿ.ಕೆ ಶಿವಕುಮಾರ್ ಅವರನ್ನು ಸೆ.04 ರಂದು ಕೋರ್ಟ್ ಎದುರು ಹಾಜರುಪಡಿಸಲಾಗಿತ್ತು. 

ಸರ್ಕಾರ ನಾಯಿ ಇದ್ದಂತೆ, ಇಡಿ ಅದರ ಬಾಲ: ಪ್ರಕರಣದಲ್ಲಿ ತನಿಖಾಧಿಕಾರಿ ತಮ್ಮ ವಿವೇಚನೆ ಉಪಯೋಗಿಸಿಲ್ಲ. ಸರ್ಕಾರ ನಾಯಿ ಇದ್ದಂತೆ ಎಂದುಕೊಂಡರೆ ಇಡಿ ಅದರ ಬಾಲದಂತೆ ವರ್ತಿಸುತ್ತಿದೆ. ಇಡಿ ಕಸ್ಟಡಿ ಅಥವಾ ನ್ಯಾಯಾಂಗ ಬಂಧನ ಅಪರೂಪದ ಸನ್ನಿವೇಶಗಳಲ್ಲಿ ಮಾತ್ರ ಸಾಧ್ಯ. ತನಿಖಾ ಸಂಸ್ಥೆಗಳು ಕಸ್ಟಡಿಗೆ ಕೇಳುವ ಮುನ್ನ ಪ್ರಬಲ ಸಾಕ್ಷ್ಯಗಳನ್ನು ನೀಡಬೇಕು ಈ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ನೀಡುವುದಕ್ಕೆ ಪೂರಕವಾದ ದಾಖಲೆ ಸಾಕ್ಷ್ಯಗಳಿಲ್ಲ ಎಂದು ಡಿಕೆ ಶಿವಕುಮಾರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ರೋಸ್ ಅವಿನ್ಯು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದಾರೆ.

SCROLL FOR NEXT