ನವದೆಹಲಿ: ಕುತ್ತಿಗೆಯಿಂದ ಸರವನ್ನು ಕದ್ದು ಪರಾರಿಯಾಗಲು ಯತ್ನಿಸಿದ ದರೋಡೆಕೋರರನ್ನು ತಪ್ಪಿಸಿಕೊಳ್ಳಲು ಬಿಡದೆ ಹಿಡಿದು ಮಹಿಳೆ ಚೆನ್ನಾಗಿ ಥಳಿಸಿದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು ಆ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕಳೆದ ಆಗಸ್ಟ್ 30ರಂದು ಈ ಘಟನೆ ದೆಹಲಿಯ ನಂಗ್ಲೊಯ್ ಎಂಬಲ್ಲಿ ನಡೆದಿದೆ. ಮಹಿಳೆಯ ಧೈರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಮಹಿಳೆ ಬಾಲಕಿಯೊಂದಿಗೆ ಸೈಕಲ್ ರಿಕ್ಷಾದಿಂದ ಇಳಿದು ಹಣ ನೀಡಿ ರಸ್ತೆ ದಾಟುತ್ತಿದ್ದ ವೇಳೆ ಇಬ್ಬರು ಬೈಕ್ ನಲ್ಲಿ ಬಂದು ಮಹಿಳೆಯ ಕುತ್ತಿಗೆಯಿಂದ ಸರ ಕಿತ್ತುಕೊಂಡರು.
ಕೂಡಲೇ ಸಮಯ ಪ್ರಜ್ಞೆ ಮತ್ತು ಧೈರ್ಯ ಮೆರೆದ ಮಹಿಳೆ ಬೈಕ್ ನ ಹಿಂಬದಿ ಸವಾರನನ್ನು ಹಿಡಿದು ಅವರು ತಪ್ಪಿಸಿಕೊಂಡು ಹೋಗುವುದನ್ನು ತಡೆದರು. ಬೈಕ್ ಸವಾರ ತಪ್ಪಿಸಿಕೊಂಡು ಓಡಿಹೋಗಿದ್ದು ಆತನನ್ನು ಹಿಡಿಯಲು ಪೊಲೀಸರು ಬಲೆಬೀಸಿದ್ದಾರೆ.ಚೈನ್ ಕಿತ್ತುಕೊಂಡ ಹಿಂಬದಿ ಸವಾರನನ್ನು ಅಲ್ಲಿ ಸೇರಿದ ಜನರು ಚೆನ್ನಾಗಿ ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ.
ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಮಹಿಳೆ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
Delhi Nangloi :
This made my day, what a courageous lady she was, didn't allow to flew away, caught him, pulled down form the Bike & rest job as usual carried by spare people standing on the street.
Zor daar haath safai