ದೇಶ

'ದಶಕಗಳಿಂದ ಬದುಕು ಕಟ್ಟಿಕೊಂಡಿದ್ದ ಸ್ವದೇಶಿಯರನ್ನೂ ವಿದೇಶಿಗರನ್ನಾಗಿ ಮಾಡಿದ ಎನ್ ಆರ್ ಸಿ'

Srinivasamurthy VN

ನವದೆಹಲಿ: ಅಸ್ಸಾಂನಲ್ಲಿನ ಎನ್ ಆರ್ ಸಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ಎನ್ ಆರ್ ಸಿಯಿಂದಾಗಿ ಸ್ವದೇಶಿಯರೂ ವಿದೇಶಗರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ನಾಗರಿಕರ ರಾಷ್ಟ್ರೀಯ ನೋಂದಣಿಯಿಂದಾಗಿ ದಶಕಗಳಿಂದಲೂ ಇಲ್ಲೇ ಜೀವಿಸಿ, ಕುಟುಂಬ ನಿರ್ಹವಣೆ ಮಾಡಿಕೊಂಡು, ವೃತ್ತಿ ನಡೆಸಿಕೊಂಡು ಆಸ್ತಿ ಮಾಡಿಕೊಂಡಿರುವ ಸ್ವದೇಶಿಯರೂ ಕೂಡ ವಿದೇಶಿಗರಾಗಿ ಬಿಟ್ಟಿದ್ದಾರೆ. ಭಾರತವನ್ನು ಬಿಟ್ಟರೆ ಬೇರೆ ಪ್ರದೇಶದ ಪರಿಚಯವೇ ಇಲ್ಲದ ಮಂದಿಯೂ ಕೂಡ ಇದ್ದಕ್ಕಿದ್ದಂತೆ ವಿದೇಶಿಗರಾಗಿದ್ದಾರೆ. 1971ರಿಂದೀಚಿಗೆ ಲಕ್ಷಾಂತರ ಮಂದಿ ಭಾರತದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಇಲ್ಲಿ ಕುಟುಂಬ, ಆಸ್ತಿ, ವೃತ್ತಿಯನ್ನು ಕಂಡುಕೊಂಡಿದ್ದಾರೆ. ಆದರೆ ಇದ್ದಕ್ಕಿದ್ದ ಹಾಗೆ ನೀನು ಭಾರತೀಯನಲ್ಲ ಎಂದರೆ ಅವರು ಎಲ್ಲಿಗೆ ಹೋಗಬೇಕು ತರೂರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಕಾಶ್ಮೀರ ವಿಚಾರವಾಗಿಯೂ ಮಾತನಾಡಿದ ತರೂರ್, ಸಂವಿಧಾನವನ್ನು ಬದಿಗೊತ್ತಿ ಮೋದಿ ಸರ್ಕಾರ ವಿಧಿ 370ಅನ್ನು ರದ್ದು ಮಾಡಿದೆ. ಅಲ್ಲಿನ ಸರ್ಕಾರ ಮತ್ತು ವಿಧಾನಸಭೆಯ ಗಮನಕ್ಕೆ ತರದೆಯೇ ರಾಜ್ಯದ ಸ್ಥಾನಮಾನವನ್ನು ಕಿತ್ತುಕೊಂಡಿದ್ದೀರಿ. ಇದು ನಿಜಕ್ಕೂ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ತರೂರ್ ಹೇಳಿದ್ದಾರೆ.

ಇನ್ನು ಈ ಹಿಂದೆ ಪ್ರಕಟಗೊಂಡ ಅಂತಿಮ ಎನ್ ಆರ್ ಸಿ ಪಟ್ಟಿಯಿಂದ ಸುಮಾರು 19 ಲಕ್ಷಕ್ಕೂ ಅಧಿಕ ಮಂದಿಯ ಹೆಸರು ಕೈ ಬಿಡಲಾಗಿದೆ. ಈ ವಿಚಾರ ಇದೀಗ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ಇದೀಗ ತೀವ್ರ ವಾಗ್ದಾಳಿ ನಡೆಸುತ್ತಿವೆ.

SCROLL FOR NEXT