ದೇಶ

ಶಾಂತಿ ಬಯಸುವ ನಮ್ಮ ಮೇಲೆ ದಾಳಿ ಮಾಡಿದರೆ ತಕ್ಕ ಪ್ರತ್ಯುತ್ತರ: ವೆಂಕಯ್ಯ ನಾಯ್ಡು

Lingaraj Badiger

ನವದೆಹಲಿ: ಶಾಂತಿ ಬಯಸುವ ನಮ್ಮ ಮೇಲೆ ಯಾರಾದರೂ ದಾಳಿ ಮಾಡಿದರೆ ನಾವು ತಕ್ಕ ಪ್ರತ್ಯುತ್ತರ ನೀಡಲು ಸಿದ್ಧರಾಗಿದ್ದೇವೆ ಎಂದು ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಎಚ್ಚರಿಕೆ ನೀಡಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕಳೆದ ಎರಡು ವರ್ಷಗಳ ತಮ್ಮ ಅಧಿಕಾರಾವಧಿಯಲ್ಲಿ ಮಾಡಿರುವ 95 ಭಾಷಣಗಳ ಸಂಗ್ರಹ "ಲೋಕತಂತ್ರ ಕೆ ಸ್ವರ್" ಹಿಂದಿ ಮತ್ತು ಇಂಗ್ಲೀಷ್ ನ "ರಿಪಬ್ಲಿಕನ್ ಎಥಿಕ್ " ಕೃತಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ವಸುದೈವ ಕುಟುಂಬಕಂ ಎಂಬ ಪರಿಕಲ್ಪನೆಯಲ್ಲಿ ನಮಗೆ ನಂಬಿಕೆಯಿದೆ. ಇಡೀ ವಿಶ್ವವೇ ಒಂದು ಕುಟುಂಬ ಎಂದು ನಂಬಿರುವ ಭಾರತ ಯಾವುದೇ ದೇಶದ ಮೇಲೆ ತಾನಾಗಿ ದಾಳಿ ಮಾಡಿಲ್ಲ. ಎಂದಿಗೂ ಆಕ್ರಮಣಕಾರಿತನ ತೋರಿಲ್ಲ ಎಂದರು.

ಶಾಂತಿ ಅನುಸರಿಸುವ ಸಂಸ್ಕೃತಿ ನಮ್ಮದು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಂವಾದ ಮತ್ತು ಚರ್ಚೆಗಳ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಅವಕಾಶಗಳಿವೆ. ಅದೇ ರೀತಿ ಯಾವುದೇ ಸಮಸ್ಯೆಯನ್ನು ಮಾತುಕತೆ ಮತ್ತು ಚರ್ಚೆಯ ಮೂಲಕ ಬಗೆಹರಿಸಿಕೊಳ್ಳಬಹುದು ಎಂಬ ನಂಬಿಕೆಯೂ ನಮ್ಮದಾಗಿದೆ. ಆದಾಗ್ಯೂ, ಯಾರಾದರೂ ಭಾರತದ ಮೇಲೆ ದಾಳಿ ಮಾಡಿದರೆ, ನಾವು ಅವರಿಗೆ ತಕ್ಕ ಉತ್ತರ ಕೊಡುತ್ತೇವೆ ಎಂದರು.

SCROLL FOR NEXT