ದೇಶ

ವಿಶ್ವದ ಯಾವುದೇ ರಾಷ್ಟ್ರ ಭಯೋತ್ಪಾದನೆಯಿಂದ ಸುರಕ್ಷಿತವಾಗಿಲ್ಲ: ರಾಜನಾಥ್ ಸಿಂಗ್

Manjula VN

ನವದೆಹಲಿ: ವಿಶ್ವದ ಯಾವುದೇ ರಾಷ್ಟ್ರ ಭಯೋತ್ಪಾದನೆಯಿಂದ ಸುರಕ್ಷಿತವಾಗಿಲ್ಲ, ಇದರ ವಿರುದ್ಧ ಅಂತರಾಷ್ಟ್ರೀಯ ಕ್ರಮ ಅಗತ್ಯವಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ಹೇಳಿದ್ದಾರೆ. 

ಕೊರಿಯಾ ಭೇಟಿ ವೇಳೆ ಸಿಯೋಲ್ ಡಿಫೆನ್ಸ್ ಡೈಲಾಗ್ 2019ರಲ್ಲಿ ಮಾತನಾಡಿರುವ ರಾಜನಾಥ್ ಸಿಂಗ್ ಅವರು, ಯುಎನ್ ಮತ್ತು ಇತರ ವೇದಿಕೆಗಳ ಮೂಲಕ ಭಾರತವು ಉಭಯಪಕ್ಷೀಯವಾಗಿ, ಪ್ರಾದೇಶಿಕವಾಗಿ ಮತ್ತು ಜಾಗತಿಕವಾಗಿ ಭಯೋತ್ಪಾದನೆ ನಿಗ್ರಹದ ಸಹಕಾರವನ್ನು ಸಕ್ರಿಯವಾಗಿ ಅನುಸರಿಸುತ್ತಿದೆ. ಭಯೋತ್ಪಾದನೆ ವಿರುದ್ಧ ಸಾಮೂಹಿಕವಾಗಿ ಅಂತರಾಷ್ಟ್ರೀಯವಾಗಿ ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದ್ದಾರೆ. 

ಇಡೀ ವಿಶ್ವ ಎದುರಿಸುತ್ತಿರುವ ಹಲವಾರು ಭದ್ರತಾ ಸವಾಲುಗಳಲ್ಲಿ ಭಯೋತ್ಪಾದನೆ ಅತ್ಯಂತ ಆತಂಕಕಾರಿಯಾಗಿದೆ. ವಿಶ್ವ ರಾಜಕಾರಣಕ್ಕೆ ಇದು ಮಾರಕವಾಗಿದ್ದು, ಭಯೋತ್ಪಾದನೆಯನ್ನು ಬೆಂಬಲಿಸುವ ಮತ್ತು ಅದಕ್ಕೆ ಹಣಕಾಸು ಒದಗಿಸುವವವರ ವಿರುದ್ಧ ಕಠಿಣ ಕ್ರಮದ ಅಗತ್ಯವಿದೆ ಎಂದು ತಿಳಿಸಿದ್ದಾರೆ. 

ಭಯೋತ್ಪಾದನೆ ಅಂತರಾಷ್ಟ್ರೀಯ ಶಾಂತಿ ಹಾಗೂ ಸುರಕ್ಷತೆಗೆ ಜಾಗತಿಕ ಮತ್ತು ಪ್ರಾದೇಶಿಕ ಸವಾಲುಗಳನ್ನು ಉಲ್ಬಣಗೊಳಿಸಿದೆ. ಹೊಸ ಮತ್ತು ಉದಯೋನ್ಮುಖ ತಂತ್ರಜ್ಞನಗಳು ಪ್ರಾದೇಶಿಕ ಮತ್ತು ಜಾಗತಿಕ ಭದ್ರತಾ ಪರಿಸರದ ಮೇಲೆ ಪರಿಣಾಮ ಬೀರಿದೆ ಎಂದಿದ್ದಾರೆ. 

SCROLL FOR NEXT