ದೇಶ

ಕಾರ್ತಿ ಚಿದಂಬರಂ 10 ಕೋಟಿ ರೂ. ಸ್ಥಿರ ಠೇವಣಿ ವಾಪಸ್ ಮಾಡಲು ಮತ್ತೆ ಸುಪ್ರೀಂ ಕೋರ್ಟ್ ನಕಾರ 

Sumana Upadhyaya

ನವದೆಹಲಿ: ವಿದೇಶಕ್ಕೆ ಪ್ರಯಾಣಿಸಲು ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಸುಪ್ರೀಂ ಕೋರ್ಟ್ ನ ನೋಂದಣಿ ಕಚೇರಿಯಲ್ಲಿ ಠೇವಣಿಯಿರಿಸಿದ್ದ 10 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ಕೋರ್ಟ್ ನಿರಾಕರಿಸಿದೆ.


ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ ಅವರನ್ನೊಳಗೊಂಡ ನ್ಯಾಯಪೀಠ, ಇನ್ನು ಮೂರು ತಿಂಗಳವರೆಗೆ ಹಣ ನ್ಯಾಯಾಲಯದಲ್ಲಿ ಸ್ಥಿರ ಠೇವಣಿಯಲ್ಲಿರಲಿದೆ ಎಂದಿದ್ದಾರೆ.


ಏರ್ ಸೆಲ್-ಮ್ಯಾಕ್ಸಿಸ್ ಮತ್ತು ಅಕ್ರಮ ಹಣ ವರ್ಗಾವಣೆ ಕೇಸಿನಲ್ಲಿ ತನಿಖೆ ಎದುರಿಸುತ್ತಿರುವ ಕಾರ್ತಿ ಚಿದಂಬರಂ ವಿದೇಶಕ್ಕೆ ಪ್ರಯಾಣಿಸಬೇಕಾದರೆ ನ್ಯಾಯಾಲಯಕ್ಕೆ 10 ಕೋಟಿ ರೂಪಾಯಿ ಸ್ಥಿರ ಠೇವಣಿಯಿಡಬೇಕೆಂದು ಷರತ್ತು ಹಾಕಿತ್ತು. 


10 ಕೋಟಿಯನ್ನು ತನಗೆ ಹಿಂತಿರುಗಿ ಎಂದು ಕಳೆದ ಮೇ ತಿಂಗಳಲ್ಲಿ ಸಹ ಕಾರ್ತಿ ಚಿದಂಬರಂ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು.

SCROLL FOR NEXT