ದೇಶ

ದಕ್ಷಿಣ ಭಾರತದಲ್ಲಿ ಉಗ್ರ ಕೃತ್ಯಕ್ಕೆ ಸಂಚು? ಗುಜರಾತಿನಲ್ಲಿ ವಾರಸುದಾರರಿಲ್ಲದ ದೋಣಿಗಳು ಪತ್ತೆ

Raghavendra Adiga

ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದಲ್ಲಿ ಭಯೋತ್ಪಾದಕ ದಾಳಿಗಳಾಗುವ ಸಾಧ್ಯತೆ ಬಗೆಗೆ ಗುಪ್ತಚರ ಮಾಹಿತಿಗಳು ಲಭ್ಯವಾಗಿದೆ ಎಂದು ಭಾರತೀಯ ಸೇನೆಯ ದಕ್ಷಿಣ ಕಮಾಂಡೋ ಪಡೆ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.

ಗುಜರಾತಿನ ಸರ್ ಕ್ರೀಕ್ ನಲ್ಲಿ ವಾರಸುದಾರರಿಲ್ಲದ ಕೆಲವು ದೋಣಿಗಳನ್ನು ವಶಕ್ಕೆ ಪಡೆದ ನಂತರ ಸೇನೆ ಈ ಎಚ್ಚರಿಕೆ ರವಾನಿಸಿದೆ.

"ಭಾರತದ ದಕ್ಷಿಣ ಭಾಗದಲ್ಲಿ ಭಯೋತ್ಪಾದಕ ದಾಳಿ ಇರಬಹುದು ಎಂಬ ಮಾಹಿತಿಯಿದೆ.ವಾರಸುದಾರರಿಲ್ಲದ ಕೆಲವು ದೋಣಿಗಳನ್ನು ಸರ್ ಕ್ರೀಕ್‌ನಿಂದ ವಶಪಡಿಸಿಕೊಳ್ಳಲಾಗಿದ್ದು ದೇಶ ವಿರೋಧಿ ಅಂಶಗಳು ಹಾಗೂ  ಭಯೋತ್ಪಾದಕರ ಕೃತ್ಯದ ಬಗೆಗೆ  ಎಚ್ಚರದಿಂದಿರಬೇಕಿದೆ. ನಾವು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದೇವೆ ”ಎಂದು ಆರ್ಮಿ ಸದರ್ನ್ ಕಮಾಂಡ್ ಕಮಾಂಡಿಂಗ್-ಇನ್-ಚೀಫ್ ಜನರಲ್ ಆಫೀಸರ್ ಲೆಫ್ಟಿನೆಂಟ್ ಜನರಲ್ ಎಸ್.ಕೆ. ಸೈನಿ ಹೇಳಿದ್ದಾರೆ.

ಆರು ಮಂದಿ ಭಯೋತ್ಪಾದಕರು ತಮಿಳುನಾಡಿಗೆ ನುಸುಳಿದ್ದಾರೆ ಎಂಬ ಗುಪ್ತಚರ ಮಾಹಿತಿಯ ಹಿನ್ನೆಲೆಯಲ್ಲಿ ಆಗಸ್ಟ್ 23 ರಂದು ಕೊಯಮತ್ತೂರು ನಗರ ಪೊಲೀಸರು ಜಿಲ್ಲೆಯಲ್ಲಿ ಕಮಾಂಡೋ ಪಡೆ ನಿಯೋಜಿಸುವಂತೆ ಕೋರಿದ್ದರು.

 13 ಪ್ರಮುಖ ರಾಜ್ಯ ಚೆಕ್ ಪೋಸ್ಟ್ ಸೇಇದಂತೆ ಜಿಲ್ಲೆಯಾದ್ಯಂತ ಭದರ್ತೆ ಹೆಚ್ಚಳ ಮಾಡಲಾಗಿದ್ದು ರಕ್ಷತೆಯ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸಲು ತಮಿಳುನಾಡು ಕಮಾಂಡೋ ಪಡೆ ಕೊಯಮತ್ತೂರಿನಿಂದ 35 ಕಿ.ಮೀ ದೂರದಲ್ಲಿರುವ ಮೆಟ್ಟುಪಾಳಯಂನಲ್ಲಿ ಧ್ವಜ ಮೆರವಣಿಗೆ ನಡೆಸಿತು.

SCROLL FOR NEXT