ದೇಶ

ನೌಕೆ ಮೂಲಕ ಭಾರತದ ಮೇಲೆ ಭಯೋತ್ಪಾದಕ ದಾಳಿ; ತೀವ್ರ ಎಚ್ಚರಿಕೆ ಘೋಷಣೆ 

Sumana Upadhyaya

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೇಳಿಸಬೇಕೆಂಬ ಪಾಕಿಸ್ತಾನದ ಕುತಂತ್ರ ವಿಫಲವಾಗಿದೆ. ಆದರೂ ಅದು ತನ್ನ ಕೊಂಕು ಬುದ್ದಿಯನ್ನು ಬಿಟ್ಟಂತೆ ಕಾಣುತ್ತಿಲ್ಲ. ಇದೀಗ ಭಾರತದ ಇತರೆಡೆಗಳಲ್ಲಿ ಹಿಂಸಾಚಾರವನ್ನು ಉಂಟುಮಾಡುವ ತಂತ್ರವನ್ನು ಮಾಡುತ್ತಿದೆ. 


ಸರ್ ಕ್ರೀಕ್ ನಲ್ಲಿ ವಾರಸುದಾರರಿಲ್ಲದ ಕೆಲವು ದೋಣಿಗಳನ್ನು ಮತ್ತೆ ಭಾರತ ವಶಪಡಿಸಿಕೊಂಡಿರುವುದು ಇದಕ್ಕೆ ಪುಷ್ಟಿ ನೀಡುತ್ತದೆ. ಭಾರತದ ದಕ್ಷಿಣ ತೀರ ಭಾಗದಲ್ಲಿ ಉಗ್ರಗಾಮಿಗಳ ದಾಳಿಯಾಗುವ ಸಾಧ್ಯತೆಯಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿರುವುದಾಗಿ ಸೇನೆಯ ಮುಖ್ಯ ದಕ್ಷಿಣ ಕಮಾಂಡ್ ತಿಳಿಸಿದ್ದಾರೆ.

ಐಎಸ್ಐ, ಪಾಕಿಸ್ತಾನದ ಸೇನಾ ಪಡೆಗಳು ಮತ್ತು ಭಯೋತ್ಪಾದಕರ ಸಂಘಟನೆಗಳು ಒಟ್ಟು ಸೇರಿ ಸಮುದ್ರ ಮಾರ್ಗದ ಮೂಲಕ ಭಾರತೀಯ ಮಿಲಿಟರಿ ಪಡೆಗಳ ಮೇಲೆ ದಾಳಿ ನಡೆಸಲು ಗುರಿಯನ್ನಿಟ್ಟುಕೊಂಡಿವೆ ಎಂದು ಗುಪ್ತಚರ ಮೂಲಗಳು ತಿಳಿಸಿರುವುದಾಗಿ ಮೂಲಗಳಿಂದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ಸಿಕ್ಕಿದೆ.


ಸೇನೆಯ ದಕ್ಷಿಣ ಕಮಾಂಡ್ ಮುಖ್ಯ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಎಸ್ ಕೆ ಸೈನಿ, ದಕ್ಷಿಣ ಭಾರತದ ಮೇಲೆ ಉಗ್ರರ ದಾಳಿಯ ಸಾಧ್ಯತೆಯಿದೆ ಎಂದು ನಮಗೆ ಮಾಹಿತಿ ಸಿಕ್ಕಿದೆ. ಕೆಲವು ಬಿಟ್ಟುಹೋಗಿದ್ದ ದೋಣಿಗಳನ್ನು ಸರ್ ಕ್ರೀಕ್ ನಲ್ಲಿ ವಶಪಡಿಸಿಕೊಳ್ಳಲಾಗಿದೆ.

SCROLL FOR NEXT