ದೇಶ

ಅ.8ರಂದು ವಾಯುಪಡೆ ಬತ್ತಳಿಕೆಗೆ ಸೇರಲಿದೆ ರಫೇಲ್ ಯುದ್ಧ ವಿಮಾನ

Manjula VN

ನವದೆಹಲಿ: ಬಹು ನಿರೀಕ್ಷಿತ ರಫೇಲ್ ಯುದ್ಧ ವಿಮಾನ ಅ.8ರಂದು ಭಾರತೀಯ ವಾಯುಪಡೆ ಬತ್ತಳಕೆಗೆ ಸೇರ್ಪಡೆಗೊಳ್ಳಲಿದೆ. 

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅ.8ರಂದು ಫ್ರಾನ್ಸ್ ನಲ್ಲಿ ಮೊದಲನೆಯ ರಫೇಲ್ ಯುದ್ಧ ವಿಮಾನವನ್ನು ಸ್ವೀಕರಿಸಲಿದ್ದಾರಂದು ವರದಿಗಳಿಂದ ತಿಳಿದುಬಂದಿದೆ. 

ಭಾರತವು 36 ರಫೇಲ್ ಜೆಟ್ ಗಳಿಗಾಗಿ ಫ್ರೆಂಚ್ ಸರ್ಕಾರದೊಂದಿದೆ ಒಪ್ಪಂದಕ್ಕೆ ಸಹಿ ಹಾಕಿದ ಸುಮಾರು 3 ವರ್ಷಗಳ ಬಳಿಕ ಮೊದಲ ಯುದ್ಧ ವಿಮಾನ ಇದೀಗ ಭಾರತಕ್ಕೆ ಆಗಮಿಸಲು ಸಿದ್ಧಗೊಂಡಿದೆ. 

ಅ.8 ರಂದು ರಾಜನಾಥ್ ಸಿಂಗ್ ಅವರು ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ಮತ್ತು ಇತರೆ ಹಿರಿಯ ಅಧಿಕಾರಿಗಳೊಂದಿಗೆ ಫ್ರಾನ್ಸ್'ಗೆ ತೆರಳಲಿದ್ದು, ಈ ವೇಳೆ ರಫೇಲ್ ಯುದ್ಧ ವಿಮಾನವನ್ನು ಸ್ವೀಕರಿಸಲಿದ್ದಾರೆ. 

ಸೆ.19-20ರಂದು ಫ್ರಾನ್ಸ್ ನಲ್ಲಿ ಭಾರತೀಯ ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ಬಿಎಸ್ ಧನೋವಾ ಅವರೊಂದಿಗೆ ರಕ್ಷಣಾ ಸಚಿವರು ರಫೇಲ್ ಯುದ್ಧ ವಿಮಾನವನ್ನು ಸ್ವೀಕರಿಸುತ್ತಾರೆಂದು ಹೇಳಲಾಗುತ್ತಿತ್ತು. ಆದರೆ, ಇದೀಗ ಅ.8 ರಂದು ಯುದ್ಧ ವಿಮಾನವನ್ನು ಸ್ವೀಕರಿಸುತ್ತಾರೆಂದು ಮೂಲಗಳು ತಿಳಿಸಿವೆ. ಆದರೆ, ವಾಯುಸೇನೆ ತಂಡವು ಸೆ.19-20ಕ್ಕೆ ಫ್ರಾನ್ಸ್ ಅಧಿಕಾರಿಗಳೊಂದಿಗೆ ದಾಖಲೆಗಳಿಗೆ ಸಹಿ ಹಾಕಲು ಫ್ರಾನ್ಸ್'ಗೆ ಪ್ರಯಾಣ ಬೆಳೆಸಲಿದ್ದು, ಬಳಿಕ ಅಲ್ಲಿ ರಫೇಲ್ ವಿಮಾನಗಳ ಬಗ್ಗೆ ತರಬೇತಿ ಆರಂಭಿಸಲಿದ್ದಾರೆ. 

ತರಬೇತಿ ಪೂರ್ಣಗೊಂಡ ಬಳಿಕ ಭಾರತೀಯ ಪೈಲೆಟ್ ಗಳು, ರಕ್ಷಣಾ ಸಚಿವರು ಹಾಗೂ ಅವರ ತಂಡವನ್ನು ಬೋರ್ಡೆಕ್ಸ್ ಬಳಿಯ ನೆಲೆಗೆ ಅವರೇ ವಿಮಾವನ್ನು ಹಾರಿಸಿಕೊಂಡು ಭಾರತಕ್ಕೆ ತರುತ್ತಾರೆಂದು ಮೂಲಗಳು ತಿಳಿಸಿವೆ. 

SCROLL FOR NEXT