ದೇಶ

ಸೈನಿಕರೇ ಹೊತ್ತೊಯ್ಯಬಲ್ಲ ಟ್ಯಾಂಕರ್ ಧ್ವಂಸಗೊಳಿಸುವ ಕ್ಷಿಪಣಿ ಪರೀಕ್ಷೆ ಯಶಸ್ವಿ!

Srinivasamurthy VN

ಅಮರಾವತಿ: ಭಾರತೀಯ ಸೇನೆಯ ಬತ್ತಳಿಕೆಗೆ ಮತ್ತೊಂದು ಪ್ರಮುಖ ಅಸ್ತ್ರ ಸೇರ್ಪಡೆಯಾಗುತ್ತಿದ್ದು, ಶುತ್ರುಪಾಳಯದ ಟ್ಯಾಂಕರ್ ಗಳನ್ನು ಛಿದ್ರಗೊಳಿಸಬಲ್ಲ ವಿನಾಶಕಾರಿ ಕ್ಷಿಪಣಿ ಪರೀಕ್ಷೆ ನಡೆಸಲಾಗಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಬುಧವಾರ ಆಂಧ್ರ ಪ್ರದೇಶದಲ್ಲಿ ಯುದ್ಧ ಟ್ಯಾಂಕರ್‌ ಹೊಡೆದುರುಳಿಸುವ ಸಾಮರ್ಥ್ಯದ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದೆ. 

ದೇಶೀಯವಾಗಿ ನಿರ್ಮಿಸಲಾದ ಈ ಕ್ಷಿಪಣಿ 'ಎಮ್‌ಪಿಎಟಿಜಿಎಮ್‌' ಅನ್ನು ಆಂಧ್ರಪ್ರದೇಶದ ಕರ್ನೂಲ್‌ ನಲ್ಲಿರುವ ರಕ್ಷಣಾ ಸಚಿವಾಲಯದ ನಿಗಾದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ.

ಯುದ್ಧಭೂಮಿಯಲ್ಲಿ ಯೋಧರು ಸುಲಭವಾಗಿ ಈ ಕ್ಷಿಪಣಿಯನ್ನು ಹೊತ್ತೊಯ್ಯಬಹುದಾಗಿದ್ದು, ಟ್ರೈಪಾಡ್‌ ಉಡಾವಣಾ ವ್ಯವಸ್ಥೆಯ ಸಹಾಯದಿಂದ ಉಡಾವಣೆ ಮಾಡಬಹುದಾಗಿದೆ. ಡಿಆರ್‌ಡಿಒ ನಡೆಸಿದ ಯಶಸ್ವಿ ಪರೀಕ್ಷೆಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅಭಿನಂದಿಸಿದ್ದಾರೆ. 

SCROLL FOR NEXT