ದೇಶ

'ಪಿಒಕೆ ವಶ ಸೇರಿದಂತೆ ಯಾವುದೇ ಕಾರ್ಯಾಚರಣೆಗೂ ಸೇನೆ ಸಿದ್ಧ'- ಸೇನಾ ಮುಖ್ಯಸ್ಥ

Nagaraja AB

ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ವಶಕ್ಕೆ ಪಡೆದು ಅದನ್ನು ಭಾರತದ ಭಾಗವಾಗಿಸಲು ಸೇನಾಪಡೆಗಳು ಸಿದ್ಧವಿರುವುದಾಗಿ  ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. ಈ ವಿಚಾರದಲ್ಲಿ ಸರ್ಕಾರ  ನಿರ್ಧಾರ ತೆಗೆದುಕೊಳ್ಳಬೇಕಾಗಿದೆ.ಯಾವುದೇ ಕಾರ್ಯಾಚರಣೆಗೂ ಸೇನೆ ಸಿದ್ಧವಿರುವುದಾಗಿ ಅವರು ಹೇಳಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರವನ್ನು ವಶಕ್ಕೆ ಪಡೆಯುವುದು ಭಾರತದ ಮುಂದಿನ ಅಜೆಂಡವಾಗಿದೆ. ಈ ವಿಚಾರದಲ್ಲಿ ಸರ್ಕಾರ ನಿರ್ಧಾರ ಕೈಗೊಳ್ಳಬೇಕಾಗಿದೆ  ಸರ್ಕಾರದ ಆದೇಶದಂತೆ ದೇಶದ ಸಂಸ್ಥೆಗಳು ಕಾರ್ಯನಿರ್ವಹಿಸಲಿವೆ. ಸೇನೆ ಯಾವಾಗಲೂ ಸಿದ್ಧವಾಗಿರುವುದಾಗಿ ಎಎನ್ ಐ ಸುದ್ದಿಸಂಸ್ಥೆಗೆ ಬಿಪಿನ್ ರಾವತ್ ಹೇಳಿಕೆ ನೀಡಿದ್ದಾರೆ.

ಇದಕ್ಕು ಮುನ್ನ ಜಮ್ಮುವಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ  ಕೇಂದ್ರ ಸಚಿವ ಜೀತೇಂದ್ರ ಸಿಂಗ್, ಪಾಕ್ ಆಕ್ರಮಿತ ಕಾಶ್ಮೀರವನ್ನು ವಶಕ್ಕೆ ಪಡೆದುಕೊಂಡು ಅದನ್ನು ಭಾರತದ ಪ್ರದೇಶವನ್ನಾಗಿ ಮಾಡುವುದು ಸರ್ಕಾರದ ಮುಂದಿನ ಅಜೆಂಡವಾಗಿದೆ ಎಂದು ಹೇಳಿಕೆ ನೀಡಿದ್ದರು. 

ಪಾಕ್ ಆಕ್ರಮಿತ ಕಾಶ್ಮೀರವನ್ನು ವಶಕ್ಕೆ ಪಡೆದು ಅದನ್ನು ಭಾರತದ ಭಾಗವಾಗಿಸುವುದು ಮುಂದಿನ ಕಾರ್ಯಸೂಚಿಯಾಗಿದೆ. ಇದು ನನ್ನೊಬ್ಬನ ಹೇಳಿಕೆ ಅಲ್ಲ, ಬಿಜೆಪಿ ಪಕ್ಷದ ಬದ್ಧತೆಯಾಗಿದೆ. ಇದರ ಭಾಗವಾಗಿ ಪಿ. ವಿ. ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 1994ರಲ್ಲಿಯೇ ಸಂಸತ್ತಿನಲ್ಲಿ  ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿತ್ತು ಎಂದು ತಿಳಿಸಿದರು.

SCROLL FOR NEXT