ದೇಶ

ಚಿನ್ಮಯಾನಂದ ವಿರುದ್ಧದ ರೇಪ್ ಕೇಸ್: ವಿಡಿಯೊ ಇರುವ ಪೆನ್ ಡ್ರೈವ್ ಎಸ್ಐಟಿಗೆ ನೀಡಿದ ಸಂತ್ರಸ್ತ ವಿದ್ಯಾರ್ಥಿನಿ

Srinivas Rao BV

ಮಾಜಿ ಕೇಂದ್ರ ಸಚಿವ, ಬಿಜೆಪಿ ನಾಯಕ ಚಿನ್ಮಯಾನಂದ ವಿರುದ್ಧದ ರೇಪ್ ಪ್ರಕರಣದ ಸಂತ್ರಸ್ತ ವಿದ್ಯಾರ್ಥಿನಿ ಎಸ್ ಐಟಿಗೆ ವ43 ವಿಡಿಯೋಗಳಿರುವ ಪೆನ್ ಡ್ರೈವ್ ನ್ನು ನೀಡಿದ್ದಾರೆ. 

ತಮ್ಮ ಬಳಿ ಇರುವ ಸಾಕ್ಷ್ಯಾಧಾರಗಳನ್ನು ನೀಡುವಂತೆ ಸ್ನಾತಕೋತ್ತರ  ವಿದ್ಯಾರ್ಥಿನಿಯನ್ನು ಎಸ್ ಐಟಿ ಕೇಳಿತ್ತು ಈ ಹಿನ್ನೆಲೆಯಲ್ಲಿ ತನ್ನ ಆರೋಪಗಳನ್ನು ಸಮರ್ಥಿಸಿಕೊಳ್ಳುವುದಕ್ಕೆ ಇರುವ ಪೆನ್ ಡ್ರೈವ್ ನ್ನು ವಿದ್ಯಾರ್ಥಿನಿ ಎಸ್ ಐಟಿಗೆ ನೀಡಿದ್ದಾರೆ. 

ಸೆ.13 ರಂದು ವಿದ್ಯಾರ್ಥಿನಿಯನ್ನು ವಿಚಾರಣೆಗೊಳಪಡಿಸಿದ್ದ ಎಸ್ ಐಟಿ, ವಿಚಾರಣೆ ಬಳಿಕ ಚಿನ್ಮಯಾನಂದ ಅವರ ಕೊಠಡಿಯಿಂದ ಕೆಲವು ಸಾಕ್ಷ್ಯಗಳನ್ನು ಕಲೆಹಾಕಿತ್ತು. 

ಸುಪ್ರೀಂ ಕೋರ್ಟ್ ಆದೇಶದಂತೆ ಎಸ್ ಐಟಿ ಸಂತ್ರಸ್ತ ಮಹಿಳೆಯರನ್ನು ಚಿನ್ಮಯಾನಂದ ಅವರ ಮನೆಗೆ ಕರೆದೊಯ್ಯಲಾಗಿತ್ತು. ಸತತ 5 ಗಂಟೆಗಳ ಕಾಲ ತನಿಖೆ ನಡೆಸಿತ್ತು. ಈ ವೇಳೆ ಫೋರೆನ್ಸಿಕ್ ತಜ್ಞರು ಸಹ ಸ್ಥಳದಲ್ಲಿದ್ದರು. ಚಿನ್ಮಯಾನಂದ ಪುರಾವೆಗಳನ್ನು ನಾಶ ಮಾಡಿದ್ದಾರೆ, ಅವರ ಕೊಠಡಿ ಈಗ ಬೇರೆ ರೀತಿಯಲ್ಲಿ ಕಾಣುತ್ತಿದೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ. 

SCROLL FOR NEXT