ದೇಶ

ಹೊಸ ಕಾಯ್ದೆ ಜಾರಿಗೂ ಮುನ್ನವೇ ನಾಗಾಲ್ಯಾಂಡ್ ಟ್ರಕ್ ಗೆ ಲಕ್ಷಗಟ್ಟಲೆ ದಂಡ!    

Srinivas Rao BV

ಭುವನೇಶ್ವರ್: ನಾಗಾಲ್ಯಾಂಡ್ ನ ನೋಂದಣಿ ಇರುವ ಟ್ರಕ್ ಗೆ ಒಡಿಶಾದ ಸಂಬಾಲ್ ಪುರದಲ್ಲಿ ಬರೊಬ್ಬರಿ 6.53 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.
 
ಹೊಸ ಮೋಟಾರು ವಾಹನ ಕಾಯ್ದೆಯಡಿ ಈ ಮೊತ್ತದ ದಂಡ ವಿಧಿಸಿದ್ದಾರೆ ಎನ್ನುವುದು ಈ ಪ್ರಕರಣದ ವಿಶೇಷ. ಹೊಸ ಸಂಚಾರಿ ನಿಯಮಗಳು ಜಾರಿಯಾಗುವುದಕ್ಕೂ ಮುನ್ನವೇ ಅಂದರೆ ಆ.10 ರಂದು ಈ ದಂಡವನ್ನು ವಿಧಿಸಲಾಗಿದ್ದು, ತಡವಾಗಿ ಈ ಪ್ರಕರಣ ಬೆಳಕಿಗೆ ಬಂದಿದೆ. 

ಸಂಬಾಲ್ ಪುರದ ಪ್ರಾದೇಶಿಕ ಸಾರಿಗೆ ಕಚೇರಿ, ಟ್ರಕ್ ಡ್ರೈವರ್ ದಿಲೀಪ್ ಕಟ್ರಾ ಹಾಗೂ ಟ್ರಕ್ ಮಾಲಿಕ ಶೈಲೇಶ್ ಶಂಕರ್ ಲಾಲ್ ಗುಪ್ತಾಗೆ ಚಲನ್ ನೀಡಿದ್ದರು.
 
5 ವರ್ಷಗಳ ಕಾಲ ರಸ್ತೆ ತೆರಿಗೆ ಪಾವತಿ ಮಾಡದೇ ಇರುವುದಕ್ಕಾಗಿ ಟ್ರಕ್ ಮಾಲಿಕನಿಗೆ 6,40,500 ರೂಪಾಯಿ ದಂಡ ವಿಧಿಸಲಾಗಿದೆ. ಇನ್ನು ಉಳಿದ ಮೊತ್ತವನ್ನು ವಾಹನ ವಿಮೆ, ದಾಖಲೆಗಳನ್ನು ಕೊಂಡೊಯ್ಯದೇ ಇರುವುದಕ್ಕೆ, ಶಬ್ದ ಮಾಲಿನ್ಯ, ಸರಕು ಸಾಗಣೆ ವಾಹನದಲ್ಲಿ ಪ್ರಯಾಣಿಕರನ್ನು ಕರೆದೊಯ್ದಿದ್ದಕ್ಕಾಗಿ ಹಾಗೂ ಪರ್ಮಿಟ್ ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ 6,600 ರೂಪಾಯಿ ದಂಡ ವಿಧಿಸಲಾಗಿದೆ. 
 

SCROLL FOR NEXT