ದೇಶ

ಹಿಂದಿ ದೇಶದ ಭಾಷೆಯಾಗಬೇಕು: ಅಮಿತ್ ಶಾ ಮನವಿ; ಪ್ರಧಾನಿ ಮೋದಿ ಶುಭಾಶಯ

Srinivasamurthy VN

ಹಿಂದಿ ದಿವಸ್ ನಿಮಿತ್ತ ಹಿಂದಿ ಪರ ಬ್ಯಾಟ್ ಬೀಸುತ್ತಿರುವ ರಾಷ್ಟ್ರ ನಾಯಕರು

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಹಿಂದಿ ದಿನದ ಅಂಗವಾಗಿ ದೇಶದ ಜನತೆಗೆ ಶುಭಾಶಯ ಕೋರಿ ಹಿಂದಿ ದೇಶದ ಜನತೆಯನ್ನು ಬೆಸೆಯುವ ಭಾಷೆಯಾಗಬೇಕು ಎಂದೂ ಒತ್ತಿ ಹೇಳಿದ್ದಾರೆ.

ಭಾರತ ಪ್ರತಿನಿಧಿಸಲು ಹಿಂದಿ ಅಗತ್ಯವಿರುವುದರಿಂದ ಪ್ರಾಥಮಿಕ ಭಾಷೆಯನ್ನಾಗಿ ಮಾಡಬೇಕೆಂದು ಮನವಿ ಮಾಡಿದರು.ರಾಷ್ಟ್ರದ ಪಿತಾಮಹ ಮಹಾತ್ಮ ಗಾಂಧಿ ಮತ್ತು ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಅವರ ಕನಸು ನನಸಾಗಿಸಲು ಹಿಂದಿ ಭಾಷೆಯ ಬಳಕೆ ದೇಶದಲ್ಲಿ ಹೆಚ್ಚಾಗಬೇಕು ಎಂದು ಸಹ ದೇಶವಾಸಿಗಳಿಗೆ ಮನವಿ ಮಾಡಿದರು.

ಭಾರತವು ಹಲವು  ಭಾಷೆಗಳ ದೇಶವಾಗಿದೆ ಮತ್ತು ಪ್ರತಿ ಭಾಷೆಗೆ ತನ್ನದೇ ಆದ ಪ್ರಾಮುಖ್ಯತೆ ಇದೆ ಆದರೆ ಪ್ರಪಂಚದಲ್ಲಿ ಭಾರತದ ಗುರುತಾಗಬೇಕಿರುವ ಭಾಷೆಯನ್ನು ಹೊಂದಿರುವುದು ಬಹಳ ಮುಖ್ಯ ಎಂದು ಅವರು ಒತ್ತಿ ಹೇಳಿದರು ಒಂದು ಭಾಷೆ ಒಂದು ದೇಶವನ್ನು ಒಂದುಗೂಡಿಸಲು ಸಾಧ್ಯವಾಗುವುದಾದರೆ ಅದು ಹಿಂದಿಗೆ ಮಾತ್ರ ಸಾಧ್ಯ ಎಂದೂ ಹೇಳಿದರು.

ಭಾರತವು ಹಲವು ಭಾಷೆಗಳ ದೇಶವಾಗಿದೆ ಮತ್ತು ಪ್ರತಿ ಭಾಷೆಗೆ ತನ್ನದೇ ಆದ ಪ್ರಾಮುಖ್ಯತೆ ಇದೆ ಆದರೆ ಪ್ರಪಂಚದಲ್ಲಿ ಭಾರತದ ಗುರುತಾಗಬೇಕಿರುವ ಭಾಷೆಯನ್ನು ಹೊಂದಿರುವುದು ಬಹಳ ಮುಖ್ಯ ಎಂದು ಅವರು ಒತ್ತಿ ಹೇಳಿದರು ಒಂದು ಭಾಷೆ ಒಂದು ದೇಶವನ್ನು ಒಂದುಗೂಡಿಸಲು ಸಾಧ್ಯವಾಗುವುದಾದರೆ ಅದು ಹಿಂದಿಗೆ ಮಾತ್ರ ಸಾಧ್ಯ ಎಂದೂ ಹೇಳಿದರು. ಏಕ ಭಾಷೆಯ ಮಹತ್ವವನ್ನು ಮಹತ್ಮಾ ಗಾಂಧಿಜಿ ಮತ್ತು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಮನಗಂಡಿದ್ದರು ಎಂದು ಹೇಳಿದ್ದಾರೆ.

ಹಿಂದಿ ದಿನದ ಸಂದರ್ಭದಲ್ಲಿ ಗೃಹ ಸಚಿವಾಲಯವು ಹದಿನೈದು ದಿನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಸಮಯದಲ್ಲಿ ಅನೇಕ ಸ್ಪರ್ಧೆಗಳು, ವಿಚಾರ ಸಂಕಿರಣಗಳು, ಸಮಾವೇಶಗಳು, ರಾಜಭಾಷಾ ಸಮ್ಮೇಳನ ಸಹ ಆಯೋಜಿಸಲಾಗುತ್ತದೆ.

ಇನ್ನು ಹಿಂದಿ ದಿವಸದ ಅಂಗವಾಗಿ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದು, ಈ ಕುರಿತು ಟ್ವಿಟ್ ಮಾಡಿದ ಅವರು, ಭಾಷೆಯ ಸರಳತೆ, ಸ್ವಾಭಾವಿಕತೆ ಮತ್ತು ಸಭ್ಯತೆ ಅಭಿವ್ಯಕ್ತಿಗೆ ಸರಿಯಾದ ಅರ್ಥ ನೀಡಲಿದೆ, ಹಿಂದಿ ಭಾಷೆ ಈ ಅಂಶಗಳನ್ನು ಸುಂದರವಾಗಿ ಒಟ್ಟುಗೂಡಿಸಿದೆ ಎಂದರು.

ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಜೆಪಿ ನಡ್ಡಾ ಕೂಡ ಇಂತಹುದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಭಾರತದಲ್ಲಿ ಅತೀ ಹೆಚ್ಚಿನವರು ಹಿಂದಿ ಭಾಷಿಕರಾಗಿದ್ದಾರೆ. ಹಿಂದಿ ದೇಶದ ಗುರುತಾಗಿದೆ ಎಂದು ನಡ್ಡಾ ಟ್ವೀಟ್ ಮಾಡಿದ್ದಾರೆ.

ಇನ್ನು ಕಾಂಗ್ರೆಸ್ ಪಕ್ಷಜದ ವಕ್ತಾರ ರಣ್ ದೀಪ್ ಸುರ್ಜೇವಾಲಾ ಅವರೂ ಕೂಡ ಟ್ವೀಟ್ ಮಾಡಿದ್ದು, ಹಿಂದಿ ಸಾಹಿತಿಗಳು, ಪತ್ರಕರ್ತರು ಸೇರಿದಂತೆ ಹಿಂದಿ ಭಾಷೆಯೊಂದಿಗೆ ಸಂಬಂಧ ಬೆಸೆದುಕೊಂಡಿರುವ ಎಲ್ಲರಿಗೂ ಹಿಂದಿ ದಿವಸ್ ನ ಶುಭಾಶಯಗಳು ಎಂದು ಹೇಳಿದ್ದಾರೆ.

SCROLL FOR NEXT