ಮಧ್ಯಪ್ರದೇಶ: ತಮ್ಮನನ್ನು ಕಲ್ಲಿನಿಂದ ಹೊಡೆದು ಕೊಂದ 17 ವರ್ಷದ ಬಾಲಕ! 
ದೇಶ

ಮಧ್ಯಪ್ರದೇಶ: ತಮ್ಮನನ್ನು ಕಲ್ಲಿನಿಂದ ಹೊಡೆದು ಕೊಂದ 17 ವರ್ಷದ ಬಾಲಕ! 

17 ವರ್ಷದ ಬಾಲಕ 14 ವರ್ಷದ ತನ್ನ ತಮ್ಮನನ್ನು ಹತ್ಯೆ ಮಾಡಿರುವ ಅಮಾನುಷ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. 

ಭೋಪಾಲ್: 17 ವರ್ಷದ ಬಾಲಕ 14 ವರ್ಷದ ತನ್ನ ತಮ್ಮನನ್ನು ಹತ್ಯೆ ಮಾಡಿರುವ ಅಮಾನುಷ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. 

10 ರೂಪಾಯಿ ಪಾಕೆಟ್ ಮನಿ ಈ ಹತ್ಯೆಗೆ ಕಾರಣ ಎಂದು ತಿಳಿದುಬಂದಿದೆ. ಬುಡಕಟ್ಟು ಜನರು ಹೆಚ್ಚಾಗಿರುವ ಮೆಹಂದಿವಾನಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 

14 ವರ್ಷದ ಕಿರಿಯ ಮಗ ಉಮೇಶ್ ಗೆ ತಂದೆ 10 ರೂಪಾಯಿ ಪಾಕೆಟ್ ಮನಿ ನೀಡಿದ್ದರು, ಆದರೆ ಹಿರಿಯ ಮಗ ರಮೇಶ್ ಗೆ ಏನನ್ನೂ ನೀಡಿರಲಿಲ್ಲ. ಇದರಿಂದ ಆಕ್ರೋಶಗೊಂಡ ರಮೇಶ್ ತನ್ನ ಸಹೋದರನನ್ನು ಹತ್ಯೆ ಮಾಡಿದ್ದಾನೆ. 

ಮೊದಲು ವಾಗ್ವಾದದಲ್ಲಿ ಆರಂಭಗೊಂಡ ಕಲಹ ನಂತರದಲ್ಲಿ ಮಾರಣಾಂತಿಕ ಹಲ್ಲೆಗೆ ತಿರುಗಿತ್ತು. ಹತಾಶನಾದ ರಮೇಶ್ ತನ್ನ ಸಹೋದರ ಉಮೇಶ್ ನನ್ನು ಕಲ್ಲಿನಿಂದ ನಿರಂತರವಾಗಿ ಹೊಡೆದು ಹತ್ಯೆ ಮಾಡಿದ್ದಾನೆ. ನಂತರ ಬಂಧನದ ಭಯದಿಂದ ಹತ್ಯೆಗೆ ಉಪಯೋಗಿಸಿದ್ದ ಕಲ್ಲನ್ನು ಮರೆಮಾಚಿದ್ದು, ತಮ್ಮ ಮೃತದೇಹವನ್ನು ಪೊದೆಯೊಳಗೆ ಇಟ್ಟಿದ್ದ, ಭಾನುವಾರ ಬೆಳಿಗ್ಗೆ ಗ್ರಾಮಸ್ಥರು ಉಮೇಶ್ ಮೃತದೇಹವನ್ನು ಕಂಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Chalo Supreme Court: ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯಕಾಂತ್; ಸುಪ್ರೀಂ ಕೋರ್ಟ್‌ನತ್ತ ಇಂಡಿಯಾ ಬ್ಲಾಕ್ ಮೆರವಣಿಗೆ!

ಸರ್ಕಾರದ 200 ಅಧಿಕಾರಿಗಳು ವಿರೋಧ ಪಕ್ಷದ ಸಂಪರ್ಕದಲ್ಲಿ: ಪ್ರತಿಭಟನಾ ಜಾಥಾಕ್ಕೂ ಮುನ್ನ ರಾಹುಲ್ ಗಾಂಧಿ ಹೊಸಬಾಂಬ್!

'ಸುಪ್ರೀಂ ಕೋರ್ಟ್‌ಗೆ ಅಲೆದು, ಅಲೆದು ಸಾಕಾಗಿ ಹೋಗಿದೆ'; ಹಿರಿಯ ವಕೀಲ ಕಪಿಲ್ ಸಿಬಲ್ ಅಚ್ಚರಿ ಹೇಳಿಕೆ, ನ್ಯಾಯಾಲಯ ಹೇಳಿದ್ದೇನು?

ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ: 3ನೇ ಜಲಾಂತರ್ಗಾಮಿ ನಿಗ್ರಹ ಯುದ್ಧನೌಕೆ 'INS ಮಂಗ್ರೋಲ್' ಸೇರ್ಪಡೆ-Video

ಪ್ರತಿಭಟನಾಕಾರರಿಗೆ ಬಿಗ್ ಶಾಕ್; ಇನ್ಮುಂದೆ ದೆಹಲಿ Jantar Mantarನಲ್ಲಿ ಧರಣಿ ನಡೆಸುವಂತಿಲ್ಲ..!