ದೇಶ

ದೇಶದಲ್ಲಿ ಮಳೆಯಿಂದ ಈ ವರ್ಷ 1,422 ಜನರ ಸಾವು: ವರದಿ

Shilpa D

ನವದೆಹಲಿ: ನೈರುತ್ಯ ಮುಂಗಾರಿನ ಪರಿಣಾಮ ಈ ವರ್ಷ ಕೆಲವೆಡೆ ಸರಾಸರಿಗಿಂತ ಸ್ವಲ್ಪ ಹೆಚ್ಚು ಮಳೆಯಾಗಿದ್ದರೂ ಕಳೆದ 9 ವರ್ಷಗಳ ಅವಧಿಗೆ ಹೋಲಿಕೆ ಮಾಡಿದರೆ ಮಳೆಯ ಅವಗಢದಿಂದ ದೇಶದಲ್ಲಿ ಈ ವರ್ಷ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂಬ ಸಂಗತಿ ಗೃಹ ಸಚಿವಾಲಯದ ವರದಿಯಿಂದ ಬೆಳಕಿಗೆ ಬಂದಿದೆ.

ಈ ಹಂಗಾಮಿನಲ್ಲಿ 1,800 ಮಳೆಯ ಅವಗಢಗಳ ಘಟನೆ ದಾಖಲಾಗಿವೆ, ಅವುಗಳಲ್ಲಿ ಅರ್ಧಕ್ಕಿಂತ ಹೆಚ್ಚಿನ ಘಟನೆಗಳು ಆಗಸ್ಟ್‌ನಲ್ಲಿ ಸಂಭವಿಸಿವೆ. ಜೂನ್-ಸೆಪ್ಟೆಂಬರ್ ನಲ್ಲಿ ಹವಾಮಾನ ಬದಲಾವಣೆಯ ಪರಿಣಾಮವೂ ಇದಕ್ಕೆ ಕಾರಣವಾಗಿದೆ. ದೇಶದ ವಿವಿಧ ಭಾಗದಲ್ಲಿ ಜೂನ್ 1 ಮತ್ತು ಸೆಪ್ಟೆಂಬರ್ 14 ರ ನಡುವೆ ಮಳೆಯ ಅವಗಢದ ಕಾರಣ ಕನಿಷ್ಠ 1,422 ಜನರು ಸಾವನ್ನಪ್ಪಿದ್ದಾರೆ, ಒಂಬತ್ತು ವರ್ಷಗಳ ಹಿಂದೆ ಕೇಂದ್ರ ಗೃಹ ಸಚಿವಾಲಯವು ಸಂಗ್ರಹಿಸಿದ ಮಾಹಿತಿಯ ಪ್ರಕಾರ ಈ ವರ್ಷವೇ ಹೆಚ್ಚು ಜನರು ಮಳೆಯ ಕಾರಣದಿಂದ ಸಾವಿಗೀಡಾಗಿದ್ದಾರೆ.ಕಳದೆ ವರ್ಷ ಮೃತಪಟ್ಟವರ ಸಂಖ್ಯೆ 1,379 ಮುಟ್ಟಿದ್ದು ಅದರಲ್ಲಿ ಕೇರಳದಲ್ಲಿ ಹೆಚ್ಚು 498 ಸಾವುಗಳು ಸಂಭವಿಸಿವೆ.

ಹಿಂದಿನ ವರ್ಷಕ್ಕಿಂತಲೂ ಮಳೆಯ ಸಂಬಂಧಿತ ಸಾವುಗಳು ಭಾರತದಾದ್ಯಂತ ಹೆಚ್ಚು ವ್ಯಾಪಕವಾಗಿದೆ ಎಂದೂ ಸಚಿವಾಲಯದ ಮಾಹಿತಿ ಬಹಿರಂಗಪಡಿಸಿದೆ. ಮಹಾರಾಷ್ಟ್ರದಲ್ಲಿ 317, ಪಶ್ಚಿಮ ಬಂಗಾಳದಲ್ಲಿ 203 ಮತ್ತು ಮಧ್ಯಪ್ರದೇಶದಲ್ಲಿ 200 ಜನರು ಮಳೆಯಿಂದ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ. 

SCROLL FOR NEXT