ದೂರದರ್ಶನ ಗುರುತು 
ದೇಶ

ದೂರದರ್ಶನಕ್ಕೆ 60ರ ಸಂಭ್ರಮ: ಅಂಚೆ ಚೀಟಿ ಬಿಡುಗಡೆ ಮಾಡಿದ ಜಾವಡೇಕರ್

ಸರ್ಕಾರಿ ಸ್ವಾಮ್ಯದ ವಾಹಿನಿ ದೂರದರ್ಶನಕ್ಕೆ 60 ವರ್ಷ ಪೂರ್ಣಗೊಂಡ ನೆನಪಿಗಾಗಿ ಸೋಮವಾರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಿದರು.

ನವದೆಹಲಿ: ಸರ್ಕಾರಿ ಸ್ವಾಮ್ಯದ ವಾಹಿನಿ ದೂರದರ್ಶನಕ್ಕೆ 60 ವರ್ಷ ಪೂರ್ಣಗೊಂಡ ನೆನಪಿಗಾಗಿ ಸೋಮವಾರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಿದರು.


ದೂರದರ್ಶನದ 60ನೇ ವರ್ಷದ ಸಂಸ್ಥಾಪನಾ ದಿನದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ದೂರದರ್ಶನದ ಸುದ್ದಿ ನಿಖರವಾಗಿದ್ದು, ಯಾವುದೇ ಭಾವನೆಗಳನ್ನು ಕೆದಕುವ ವಿಷಯಗಳಿರುವುದಿಲ್ಲ ಎಂದು ಹೇಳಿದರು.


ಯಾವುದೇ ಭಾವನೆಗಳನ್ನು ಉದ್ರಿಕ್ತಗೊಳಿಸದೆ ನಿಖರವಾದ ಮತ್ತು ಅತಿ ವೇಗವಾಗಿ ಸುದ್ದಿ ಕೊಡುತ್ತಿರುವುದು ಸಾರ್ವಜನಿಕ ಪ್ರಸಾರ ಸಂಸ್ಥೆಯ ಮುಖ್ಯ ಸಾಧನೆಯಾಗಿದೆ ಎಂದು ಜಾವಡೇಕರ್ ಹೇಳಿದರು.


ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.


ದೂರದರ್ಶನ ಮಹಾನಿರ್ದೇಶಕರಾದ ಸುಪ್ರಿಯಾ ಸಾಹು, ಕಳೆದ ಕೆಲವು ವರ್ಷಗಳಲ್ಲಿ ದೂರದರ್ಶನ ಮಾಡಿದ ಸಾಧನೆಗಳನ್ನು ವಿವರಿಸಿದರು.


1959 ಸೆಪ್ಟೆಂಬರ್ 15ರಂದು ಸ್ಥಾಪನೆಯಾದ ಸ್ಟುಡಿಯೋ ಮತ್ತು ಟ್ರಾನ್ಸ್ ಮಿಟರ್ ಮೂಲಸೌಕರ್ಯದ ದೃಷ್ಟಿಯಿಂದ ದೂರದರ್ಶನವು ಭಾರತದ ಅತಿದೊಡ್ಡ ಪ್ರಸಾರ ಸಂಸ್ಥೆಗಳಲ್ಲಿ ಒಂದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!