ದೇಶ

ಹೌಸ್ಟನ್  ಮೆಗಾ ರ‍್ಯಾಲಿಯಲ್ಲಿ ಟ್ರಂಪ್ ವಿಶೇಷ ಅತಿಥಿ: ಮೋದಿ ಸ್ವಾಗತ

Nagaraja AB

ನವ ದೆಹಲಿ: ಸೆಪ್ಟೆಂಬರ್ 22 ರಂದು ನಡೆಯಲಿರುವ ಅಮೆರಿಕಾದ ಹೌಸ್ಟನ್ ಮೆಗಾ ಹೌದಿ ರ‍್ಯಾಲಿ ಮೋದಿ ಕಾರ್ಯಕ್ರಮದಲ್ಲಿ ಡೊನಾಲ್ಡ್ ಟ್ರಂಪ್ ಪಾಲ್ಗೊಳ್ಳುವ ಶ್ವೇತಭವನ ಪ್ರಕಟಣೆಯನ್ನು ಪ್ರಧಾನಿ ನರೇಂದ್ರ ಮೋದಿ  ಸ್ವಾಗತಿಸಿದ್ದಾರೆ.

ಭಾರತ ಹಾಗೂ ಅಮೆರಿಕಾ ನಡುವಣ ವಿಶೇಷ ಸ್ನೇಹವಿದ್ದು, 22 ರಂದು ನಡೆಯಲಿರುವ ಹೌಸ್ಟನ್ ಕಾರ್ಯಕ್ರಮದಲ್ಲಿ ಡೊನಾಲ್ಡ್ ಟ್ರಂಪ್ ಪಾಲ್ಗೊಳ್ಳುತ್ತಿರುವುದು ಹರ್ಷದಾಯಕವಾಗಿದೆ. ಅನಿವಾಸಿ ಭಾರತೀಯರ ಕಾರ್ಯಕ್ರಮದಲ್ಲಿ ಅವರನ್ನು ಸ್ವಾಗತಿಸಲು ಎದುರು ನೋಡುತ್ತಿರುವುದಾಗಿ ಮೋದಿ ಟ್ವೀಟ್ ಮಾಡಿದ್ದಾರೆ.

ವಿಶೇಷ ಅತಿಥಿಯಾಗಿ ಡೊನಾಲ್ಡ್ ಟ್ರಂಪ್ ಪಾಲ್ಗೊಳ್ಳುವುದರಿಂದ ಭಾರತ ಹಾಗೂ ಅಮೆರಿಕಾ ನಡುವಣ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ ಎಂದು ಅವರು ಮತ್ತೊಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಸುಮಾರು 50 ಸಾವಿರ ಭಾರತ- ಅಮೆರಿಕಾದ ಜನರು ಈ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಹೆಸರು ನೋಂದಾಯಿಸಿಕೊಂಡಿದ್ದಾರೆ. ಅಮೆರಿಕಾದ ಇತರ ರಾಜಕೀಯ ಮುಖಂಡರು ಕೂಡಾ ಇದರಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. 

ಮೋದಿ- ಟ್ರಂಟ್ ಜೊತೆಯಾಗಿ ರ‍್ಯಾಲಿಯಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಉಭಯ ದೇಶಗಳ ನಡುವಣ ಒಪ್ಪಂದಗಳಲ್ಲಿ ಮತ್ತಷ್ಟು ಗಟ್ಟಿಯಾಗಲು ಅವಕಾಶವಾಗಲಿದೆ ಎಂದು ಶ್ವೇತ ಭವನ ಪತ್ರಿಕಾ ಕಾರ್ಯದರ್ಶಿ ಸ್ಟೆಫನಿ ಗ್ರಿಶಮ್  ಹೇಳಿದ್ದಾರೆ.

SCROLL FOR NEXT