ದೇಶ

ಗಡಿ ನುಸುಳಲು ಪಾಕ್ ಯತ್ನ: ಸೇನೆ ನೀಡಿದ ದಿಟ್ಟ ಉತ್ತರ ವಿಡಿಯೋದಲ್ಲಿ ಸೆರೆ

Manjula VN

ಕಾಶ್ಮೀರ ಶಾಂತಿ ಹಾಳು ಮಾಡಲು ಸತತ ಯತ್ನ: ಬಿಳಿ ಬಾವುಟ ತೋರಿಸಿ ಮೃತದೇಹ ಕೊಂಡೊಯ್ದ ಪಾಕ್ 
ನವದೆಹಲಿ:
ಜಮ್ಮು ಮತ್ತು ಕಾಶ್ಮೀರದ ಶಾಂತಿ ಹದಗೆಡಿಸಲು ಸತತ ಯತ್ನ ನಡೆಸುತ್ತಿರುವ ಪಾಕಿಸ್ತಾನ ಗಡಿ ನಿಯಂತ್ರಣ ರೇಖೆ ಬಳಿ ತನ್ನ ಸೇನೆ ಹಾಗೂ ಉಗ್ರರನ್ನು ನಿಯೋಜನೆಗೊಳಿಸಿದ್ದು, ಭಾರತ ಗಡಿ ನುಸುಳಲು ಪಾಕಿಸ್ತಾನ ಬಿಎಟಿ ನಡೆಸಿದ ಯತ್ನಕ್ಕೆ ಭಾರತೀಯ ಸೇನೆ ದಿಟ್ಟ ಉತ್ತರ ನೀಡಿದ್ದು, ಯತ್ನವನ್ನು ವಿಫಲಗೊಳಿಸಿದೆ. ಸೇನೆಯ ಈ ಕಾರ್ಯಾಚರಣೆ ವಿಡಿಯೋದಲ್ಲಿ ಸೆರೆಯಾಗಿದೆ. 

ನುಸುಳುಕೋರರ ಯತ್ನ ವಿಫಲಗೊಳ್ಳುವಂತೆ ಮಾಡಿರುವ ವಿಡಿಯೋವನ್ನು ಭಾರತೀಯ ಸೇನೆ ಬಿಡುಗಡೆ ಮಾಡಿದೆ. ಸೆ.13-13ರ ರಾತ್ರಿ ಪಾಕಿಸ್ತಾನ ಗಡಿಕಾವಲು ಪಡೆ (ಬಿಎಟಿ) ಹಾಜಿಪುರ್ ನಲ್ಲಿ ಒಳಸುಳಲು ಯತ್ನ ನಡೆಸಿದ್ದು, ಈ ಯತ್ನದ ವಿಡಿಯೋ ಥರ್ಮಲ್ ಇಮೇಜ್ ಸರೆಯಾಗಿದೆ. ಗಡಿ ನಸುಳುವ ವೇಳೆ ಭಾರತೀಯ ಸೇನೆ ಗ್ರೆನೇಡ್ ದಾಳಿ ನಡೆಸಿದ್ದು, ನುಸುಳುವಿಕೆ ಯತ್ನ ವಿಫಲಗೊಳ್ಳುವಂತೆ ಮಾಡಿದೆ. ಇದಾದ ಬಳಿಕ ಪಾಕಿಸ್ತಾನ ಸೇನೆಯು ಭಾರತೀಯ ಸೇನೆಗೆ ಬಿಳಿ ಧ್ವಜವನ್ನು ತೋರಿಸಿ ತನ್ನ ಸೈನಿಕರ ಮೃತದೇಹಗಳನ್ನು ಪಡೆದುಕೊಂಡಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಕಳೆದ ತಿಂಗಳಿನಲ್ಲಿ ಪಾಕಿಸ್ತಾನ ನಿರಂತರವಾಗಿ ಉಗ್ರರನ್ನು ಭಾರತದೊಳಗೆ ನುಸುಳಿಸುವ ಯತ್ನಗಳನ್ನು ನಡೆಸಿದ್ದು, ಇಂತಹ ಯತ್ನಕ್ಕೆ ದಿಟ್ಟ ಉತ್ತರ ನೀಡುವ ಮೂಲಕ ಸೇನಾಪಡೆಗಳು 15 ಒಳಸುಳುವ ಪ್ರಯತ್ನಗಳನ್ನು ವಿಫಲಗೊಳ್ಳುವಂತೆ ಮಾಡಿದೆ. 

ಪಾಕಿಸ್ತಾನ ಭಾರತದ ಗಡಿ ಒಳನುಸುಳುವಿಕೆಗೆ ಯಾವ ರೀತಿಯ ಪ್ರಯತ್ನ ನಡೆಸುತ್ತಿದೆ ಎಂಬುದನ್ನು ಸೇನೆ ವಿಡಿಯೋ ಮೂಲಕ ಸ್ಪಷ್ಟವಾಗಿ ಬಹಿರಂಗಪಡಿಸಿದೆ. ನೈಟ್ ವಿಷನ ಕ್ಯಾಮೆರಾದಲ್ಲಿ ಈ ಚಿತ್ರಗಳಲ್ಲಿ ಪಾಕಿಸ್ತಾನದಿಂದ ಬರುವ ಉಗ್ರರು ಭಾರತದೊಳಗೆ ನುಗ್ಗಲು ಯತ್ನಿಸುತ್ತಿರುವುದು ಕಂಡು ಬಂದಿದೆ. 

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಭಾರತ ರದ್ದುಗೊಳಿಸಿದ ಬಳಿಕ ಪಾಕಿಸ್ತಾನ ಸೇನೆ ಮತ್ತು ಉಗ್ರರು ಗಡಿ ನಿಯಂತ್ರಣ ರೇಖೆ ಬಳಿ ಸತತವಾಗಿ ಭಾರತದ ಗಡಿ ನುಸುಳಲು ಯತ್ನ ನಡೆಸುತ್ತಿದ್ದು, ಪಾಕಿಸ್ತಾನ ಎಲ್ಲಾ ಯತ್ನಗಳನ್ನು ಭಾರತೀಯ ಸೇನೆ ವಿಫಲಗೊಳ್ಳುವಂತೆ ಮಾಡಿದೆ. 

SCROLL FOR NEXT