ದೇಶ

ಭಾರತದ ಗಡಿಗಳ ಕುರಿತು ಇತಿಹಾಸ ಬರೆಯಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮ್ಮತಿ

Manjula VN

ನವದೆಹಲಿ: ದೇಶದ ಗಡಿಗಳ ಇತಿಹಾಸ ಬರೆಯುವ ಕೆಲಸ ಪ್ರಾರಂಭಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅನುಮೋದನೆ ನೀಡಿದ್ದಾರೆ.

ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ ನೆಹರೂ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯದ ಅಧಿಕಾರಿಗಳು, ಗೃಹ ವ್ಯವಹಾರಗಳ ಸಚಿವಾಲಯ, ವಿದೇಶಾಂಗ ಸಚಿವಾಲಯ ಮತ್ತು ರಕ್ಷಣಾ ಸಚಿವಾಲಯದ ಅಧಿಕಾರಿಗಳ ಸಭೆಯ ನಂತರ ಈ ತೀರ್ಮಾನಕ್ಕೆ ಬಂದಿದ್ದಾರೆ. ಎಂದು ರಕ್ಷಣಾ ಸಚಿವಾಲಯದ ಅಧಿಕೃತ ಹೇಳಿಕೆ ಬುಧವಾರ ತಿಳಿಸಿದೆ.

ಈ ಕಾರ್ಯ ಗಡಿಗಳ ವಿವಿಧ ಅಂಶಗಳನ್ನು ಒಳಗೊಂಡಿದ್ದು ಇವುಗಳ ಪೈಕಿ ಗಡಿಗಳನ್ನು ತಯಾರಿಸುವುದು ಮತ್ತು ನಿರ್ಮಿಸುವುದು ಮತ್ತು ಸ್ಥಳಾಂತರಿಸುವುದು ಭದ್ರತಾ ಪಡೆಗಳ ಪಾತ್ರ; ಗಡಿಪ್ರದೇಶದ ಜನರ ಪಾತ್ರ, ಜನಾಂಗೀಯತೆ, ಸಂಸ್ಕೃತಿ ಮತ್ತು ಅವರ ಜೀವನದ ಸಾಮಾಜಿಕ-ಆರ್ಥಿಕ ಅಂಶಗಳನ್ನು ಒಳಗೊಂಡಿದ್ದು, ಇದು ಎರಡು ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

SCROLL FOR NEXT