ದೇಶ

ಅಮಿತ್ ಶಾ,ಮಮತಾ ಭೇಟಿ: ಎನ್ ಆರ್ ಸಿ ಪಟ್ಟಿಯಿಂದ 19 ಲಕ್ಷ  ಜನರ ಹೆಸರು ನಾಪತ್ತೆ ಬಗ್ಗೆ ಚರ್ಚೆ!

Nagaraja AB

ನವದೆಹಲಿ:ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದು,ರಾಷ್ಟ್ರೀಯ ಪೌರತ್ವ ನೋಂದಣಿ- ಎನ್ ಆರ್ ಸಿ ಪಟ್ಟಿಯಿಂದ 19 ಲಕ್ಷ ಮಂದಿಯನ್ನು ಕೈ ಬಿಟ್ಟಿರುವ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಎನ್ ಆರ್ ಸಿ ಪಟ್ಟಿಯಿಂದ 19 ಲಕ್ಷ ಕೈ ಬಿಟ್ಟಿರುವ ಬಗ್ಗೆ ಚರ್ಚಿಸುವ ಸಲುವಾಗಿಯೇ ದೆಹಲಿಗೆ ಬಂದಿದ್ದೇನೆ.ಎಲ್ಲರನ್ನೂ ಈ ಪಟ್ಟಿಯಲ್ಲಿ ಸೇರಿಸಬೇಕು ಎಂದು ಗೃಹ ಸಚಿವರ ಭೇಟಿ ಬಳಿಕ ಮಮತಾ ಬ್ಯಾನರ್ಜಿ ಸುದ್ದಿಗಾರರಿಗೆ ತಿಳಿಸಿದರು.

ಸಾರ್ವತ್ರಿಕ ಚುನಾವಣೆ ಬಳಿಕ ಇದೇ ಮೊದಲ ಬಾರಿಗೆ ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದ ಮಮತಾ ಬ್ಯಾನರ್ಜಿ,ಪಶ್ಚಿಮ ಬಂಗಾಳವನ್ನು ಬಾಂಗ್ಲಾ ಎಂದು ಹೆಸರು ಬದಲಾವಣೆ ಸಂಬಂಧ ಮಾತುಕತೆ ನಡೆಸಿದ್ದು, ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಯಾವುದೇ ಸಲಹೆಯನ್ನು ಸ್ವೀಕರಿಸುವುದಾಗಿ ಅವರು ಹೇಳಿದ್ದಾರೆ.

ಬಂಗಾಳ ಹೆಸರನ್ನು ಬದಲಾವಣೆ ಮಾಡಬಹುದು ಅಥವಾ ಹೆಚ್ಚುವರಿಯಾಗಿ ಏನಾದರೂ ಹೆಸರನ್ನು ಸೇರಿಸಬಹುದು. ಪಶ್ಚಿಮ ಬಂಗಾಳ ಸರ್ಕಾರದಿಂದ ಕೇಂದ್ರ ಸರ್ಕಾರದ ನಡುವಿನ ರಾಜಕೀಯ ಹಸ್ತಕ್ಷೇಪಗಳ ಬಗ್ಗೆಯೂ ಮಾತುಕತೆ ನಡೆಸಲಾಗಿದೆ ಎಂದು ಮಮತಾ  ಬ್ಯಾನರ್ಜಿ ತಿಳಿಸಿದರು.

ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ 18 ಸ್ಥಾನಗಳನ್ನು ಗೆದ್ದಿರುವ ಟಿಎಂಸಿಗೆ ಬಿಜೆಪಿ ಪ್ರಮುಖ ಪ್ರತಿಪಕ್ಷವಾಗಿದೆ. 

SCROLL FOR NEXT