ದೇಶ

ಭಯೋತ್ಪಾದಕರು ಶಸ್ತ್ರಾಸ್ತ್ರ ಕಸಿದುಕೊಂಡ ಪ್ರಕರಣ: ಕಿಶ್ತ್‌ವಾರ್‌ನಲ್ಲಿ 30 ಕ್ಕೂ ತಳಮಟ್ಟದ ಕಾರ್ಯಕರ್ತರ ಬಂಧನ

Srinivas Rao BV

ಜಮ್ಮು: ಇತ್ತೀಚೆಗೆ ಲಷ್ಕರ್-ಎ-ತೊಯ್ಬಾ ಸಂಘಟನೆಯ ಮೂವರು ಭಯೋತ್ಪಾದಕರು ಪಿಡಿಪಿ ನಾಯಕನ  ಕುಟುಂಬವನ್ನು ಒತ್ತೆಯಾಳುಗಳಾಗಿರಿಸಿಕೊಂಡು ಅವರ ಬಳಿ ಇದ್ದ ಎಕೆ 47 ಬಂದೂಕು ಕಸಿದುಕೊಂಡ ಪರಾರಿಯಾದ ನಂತರ, ಭದ್ರತಾ ಪಡೆಗಳು ಜಮ್ಮುವಿನ ಕಿಶ್ತ್‌ವಾರ್‌ ಜಿಲ್ಲೆಯಲ್ಲಿ 30 ಕ್ಕೂ ಸಂಘಟನೆಯ ತಳಮಟ್ಟದ ಕಾರ್ಯಕರ್ತರನ್ನು ಬಂಧಿಸಿವೆ. 

'ಭದ್ರತಾ ಪಡೆಗಳು ಸೇನೆ  ಮತ್ತು ಗುಪ್ತಚರ ಸಂಸ್ಥೆಗಳ ತಂಡಗಳೊಂದಿಗೆ ಬುಧವಾರ ಮತ್ತು ಗುರುವಾರ ಶೋಧ  ಕಾರ್ಯಾಚರಣೆಯನ್ನು ಆರಂಭಿಸಲಾಗಿದ್ದು, ಇದು ಕಳೆದ ತಡರಾತ್ರಿಯವರೆಗೆ ನಡೆಯಿತು' ಎಂದು  ಅಧಿಕೃತ ಮೂಲಗಳು ಶುಕ್ರವಾರ ತಿಳಿಸಿವೆ. ನಿರ್ದಿಷ್ಟ ಮಾಹಿತಿಯ ಮೇಲೆ ಬುಧವಾರ ಸುಮಾರು 12 ತಳಮಟ್ಟದ ವಿವಿಧ ದಾಳಿಗಳ ವೇಳೆ ಬಂಧಿಸಲಾಗಿದೆ. ಇವರನ್ನು ವಿಚಾರಣೆಗೊಳಪಡಿಸಿದ ನಂತರ ಗುರುವಾರ 24 ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ. ವಿಚಾರಣೆ ವೇಳೆ ಈ ಕಾರ್ಯಕರ್ತರಿಗೆ ಭಯೋತ್ಪಾದಕರೊಂದಿಗೆ ನೇರ ಅಥವಾ ಪರೋಕ್ಷ ಸಂಪರ್ಕವಿರುವುದು ಗೊತ್ತಾಗಿದೆ. 

SCROLL FOR NEXT