ದೇಶ

ಮನೋಹರ್ ಲಾಲ್ ಕಟ್ಟರ್ ವಿರುದ್ಧ ಕಣಕ್ಕಿಳಿಯಲಿರುವ ತೇಜ್ ಬಹದ್ದೂರ್ ಯಾದವ್ 

Srinivas Rao BV

ಹರ್ಯಾಣ:  ಬಿಎಸ್ಎಫ್ ನ ಮಾಜಿ ಯೋಧ ತೇಜ್ ಬಹದ್ದೂರ್ ಯಾದವ್ ಸೆ.29 ರಂದು ದುಷ್ಯಾಂತ್ ಚೌಟಾಲ ನೇತೃತ್ವದ ಜನನಾಯಕ್ ಜನತಾ ಪಕ್ಷ ಸೇರ್ಪಡೆಯಾಗಿದ್ದು, ಹರ್ಯಾಣ ಸಿಎಂ ಮನೋಹರ್ ಲಾಲ್ ಕಟ್ಟರ್ ವಿರುದ್ಧ ಸ್ಪರ್ಧಿಸಲಿದ್ದಾರೆ. 

ತೇಜ್ ಬಹದ್ದೂರ್ ಯಾದವ್ ಬಿಎಸ್ಎಫ್ ಗೆ  ಪೂರೈಕೆಯಾಗುತ್ತಿರುವ ಆಹಾರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ವಿಡಿಯೋ ಮಾಡಿ 2017 ರಲ್ಲಿ ಬಿಎಸ್ಎಫ್ ನಿಂದ ವಜಾಗೊಂಡಿದ್ದರು. 

ಮಹೇಂದ್ರಗಢ್ ಜಿಲ್ಲೆಯ ಮೂಲದವರಾಗಿರುವ ಯಾದವ್ ನವದೆಹಲಿಯಲ್ಲಿ ಜೆಜೆಪಿ ಸೇರ್ಪಡೆಯಾಗಿದ್ದಾರೆ. ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ವಿರುದ್ಧ ಸ್ಪರ್ಧಿಸಲು ನನಗೆ ಅವಕಾಶ ನೀಡಿರುವ ಜೆಜೆಪಿ ಹಾಗೂ ದುಷ್ಯಂತ್ ಚೌಟಾಲಗೆ ಧನ್ಯವಾದ ತಿಳಿಸುತ್ತೇನೆ ಎಂದು ಯಾದವ್ ಹೇಳಿದ್ದಾರೆ. 2019 ರ ಲೋಕಸಭಾ ಚುನಾವಣೆಯಲ್ಲಿ ತೇಜ್ ಬಹದ್ದೂರ್ ಅವರನ್ನು ಸಮಾಜವಾದಿ ಪಕ್ಷದಿಂದ ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ವಿರುದ್ಧ ಕಣಕ್ಕಿಳಿಸಲಾಗಿತ್ತು. ಆದರೆ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿತ್ತು.

SCROLL FOR NEXT