ದೇಶ

ದೇಶದಲ್ಲಿ ವೈದ್ಯರು ಸೇರಿ ಸುಮಾರು 50 ವೈದ್ಯಕೀಯ ಸಿಬ್ಬಂದಿಗೆ ಕೊವಿಡ್ -19 ಪಾಸಿಟಿವ್

Lingaraj Badiger

ನವದೆಹಲಿ: ಮಹಾಮಾರಿ ಕೊರೋನಾ ವೈರಸ್ ದೇಶದಲ್ಲಿ ವೈದ್ಯರನ್ನೂ ಬಿಡದೆ ಕಾಡುತ್ತಿದ್ದು, ಇದುವರೆಗೆ ದೇಶಾದ್ಯಂತ ವೈದ್ಯರು ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ.

ಸೋಂಕಿತ ಈ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಕೊರೋನಾ ವೈರಸ್ ಪೀಡಿತ ರೋಗಿಗಳಿಂದಲೇ ತಗುಲಿದೆಯೇ ಅಥವಾ ಬೇರೆ ವ್ಯಕ್ತಿಗಳಿಂದ ತಗುಲಿದೆಯೇ ಎಂಬುದನ್ನು ಆರೋಗ್ಯ ಸಚಿವಾಲಯ ಪರಿಶೀಲಿಸುತ್ತಿದೆ.

ವೈದ್ಯಕೀಯ ಸಿಬ್ಬಂದಿಗೆ ರೋಗಿಗಳಿಂದಲೇ ಕೊರೋನಾ ವೈರಸ್ ತಗುಲಿದೆಯೇ ಅಥವಾ ಹೊರಗಡೆ ಬೇರೆ ವ್ಯಕ್ತಿಗಳಿಂದ ತಗುಲಿದೆಯೇ ಎಂಬದನ್ನು ಪತ್ತೆ ಹಚ್ಚಲು ಯತ್ನಿಸುತ್ತಿದ್ದೇವೆ ಎಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದುವರೆಗೆ ಸುಮಾರು 50ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿಗೆ ಕೊವಿಡ್-19 ಪಾಸಿಟಿವ್ ಪತ್ತೆಯಾಗಿದೆ. ಈ ಪೈಕಿ ಕೆಲವರು ಕೊರೋನಾ ವೈರಸ್ ಪೀಡಿತ ರೋಗಿಗೆ ಯಾವುದೇ ಚಿಕಿತ್ಸೆ ನೀಡಿಲ್ಲ. ಆದರೂ ಅವರಿಗೆ ಸೋಂಕು ತಗುಲಿದ್ದು ಹೇಗೆ ಎಂಬುದನ್ನು ಪತ್ತೆ ಹಚ್ಚಲು ಅವರ ಪ್ರಯಾಣ ಹಿನ್ನೆಲೆ ಮತ್ತು ಸಂಪರ್ಕಿಸಿದ ವ್ಯಕ್ತಿಗಳನ್ನು ಪತ್ತೆ ಹಚ್ಚುವ ಕೆಲಸ ಸರ್ಕಾರ ಮಾಡುತ್ತಿದೆ ಎಂದಿದ್ದಾರೆ.

SCROLL FOR NEXT