ದೇಶ

ರಾಯಪುರ: ಲಾಕ್ ಡೌನ್ ವೇಳೆ ಜನಿಸಿದ ಅವಳಿ ನವಜಾತ ಶಿಶುಗಳಿಗೆ ಕೊರೋನಾ-ಕೋವಿಡ್ ಎಂದು ನಾಮಕರಣ

Nagaraja AB

ರಾಯಪುರ:ಹೊಸ ಸಾಂಕ್ರಾಮಿಕ ವೈರಾಣುವಿನಿಂದ ಜಗತ್ತಿನಾದ್ಯಂತ ಮನುಕುಲ ಸಂಕಷ್ಟ ಸಿಲುಕಿ ತೊಳಲಾಡುತ್ತಿರುವಂತೆ 
ಛತ್ತೀಸ್ ಗಢದ ದಂಪತಿಯೊಬ್ಬರು ತಮ್ಮ ಅವಳಿ ನವಜಾತ ಶಿಶುಗಳಿಗೆ ಕೊರೋನಾ- ಕೋವಿಡ್ ಎಂದು ನಾಮಕರಣ ಮಾಡಿದ್ದಾರೆ.

ಲಾಕ್ ಡೌನ್ ನಂತಹ ಸಂಕಷ್ಟದ ಸಮಯದಲ್ಲೂ ಯಾವುದೇ ತೊಂದರೆಯಿಲ್ಲದೆ  ರಾಯಪುರದ ದಂಪತಿಗೆ ಗಂಡು ಹಾಗೂ ಹೆಣ್ಣು ಶಿಶುಗಳ ಜನನವಾಗಿದೆ. ಇದರ ನೆನಪಿಗೊಸ್ಕರ ಕೊರೋನಾ- ಕೋವಿಡ್ ಎಂದು ಅವಳಿ ಶಿಶುಗಳಿಗೆ ಹೆಸರನ್ನಿಟ್ಟಿದ್ದಾರೆ. 

ಇಡೀ ದೇಶದಲ್ಲಿ ಲಾಕ್ ಡೌನ್ ಜಾರಿಯಾಗಿದ್ದರೂ ಮಾರ್ಚ್ 26-27 ರ ನಡುವೆ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಅವಳಿ ಶಿಶುಗಳ ಜನನವಾಗಿದೆ. ಹಾಗಾಗೀ ಗಂಡು ಮಗುವಿಗೆ ಕೋವಿಡ್, ಹೆಣ್ಣು ಮಗುವಿಗೆ ಕೊರೋನಾ ಎಂದು ಹೆಸರು ಇಟ್ಟಿರುವುದಾಗಿ 27 ವರ್ಷದ ತಾಯಿ ಪ್ರೀತಾ ವರ್ಮಾ ತಿಳಿಸಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. 

ಅಪಾಯಕಾರಿ ವೈರಸ್ ಜಗತ್ತಿನಾದ್ಯಂತ ಜೀವಕ್ಕೆ ಬೆದರಿಕೆಯನ್ನುಂಟುಮಾಡುತ್ತಿದೆ ಆದರೆ, ಇದು ಜನರಲ್ಲಿ ನೈರ್ಮಲ್ಯ, ಸ್ವಚ್ಛತೆ ಮತ್ತಿತರ ಉತ್ತಮ ಅಭ್ಯಾಸಗಳ ಬಗ್ಗೆ ಅರಿವು ಮೂಡಿಸಿದೆ. ಅಲ್ಲದೇ ಆಸ್ಪತ್ರೆ ಸಿಬ್ಬಂದಿಗಳು ಕೂಡಾ ಕೊರೋನಾ- ಕೋವಿಡ್ ಎಂದು ಕರೆಯುತ್ತಿದ್ದರಿಂದ ಅದೇ ಹೆಸರನ್ನು ಇಡಲು ನಿರ್ಧರಿಸಿದ್ದಾಗಿ ಪ್ರೀತಿ ವರ್ಮಾ ಹೇಳಿದ್ದಾರೆ.

SCROLL FOR NEXT