ದೇಶ

ಮಾಧ್ಯಮಗಳನ್ನು ದೂಷಿಸಿ ಸೋಂಕು ವಿರುದ್ಧ ಹೋರಾಡಲು ಸಾಧ್ಯವಿಲ್ಲ: ಸರ್ಕಾರದ ಬಗ್ಗೆ ಸಂಪಾದಕರ ಸಂಘ ತೀವ್ರ ಆಕ್ಷೇಪ

Sumana Upadhyaya

ನವದೆಹಲಿ: ಮಾಧ್ಯಮಗಳು ವಲಸೆ ಕಾರ್ಮಿಕರಲ್ಲಿ ಆತಂಕ ಉಂಟುಮಾಡಿವೆ ಎಂದು ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಮಾಧ್ಯಮಗಳನ್ನು ದೂಷಿಸುತ್ತಿರುವುದನ್ನು ಭಾರತ ಸಂಪಾದಕರ ಸಂಘ(ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ) ತೀವ್ರವಾಗಿ ಆಕ್ಷೇಪಿಸಿದೆ.

21 ದಿನಗಳ ಲಾಕ್ ಡೌನ್ ಸಂದರ್ಭದಲ್ಲಿ ಮಾಧ್ಯಮಗಳು ಆತಂಕ ಸೃಷ್ಟಿಸಿ ವಲಸೆ ಕಾರ್ಮಿಕರಲ್ಲಿ ತೀವ್ರ ಗೊಂದಲ ಹುಟ್ಟಿಸಿದ್ದಾರೆ, ಅವರು ಊರಿಗೆ ಹೋಗುವ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದು ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಆರೋಪಿಸಿದೆ. ಇಂತಹ ಆರೋಪಗಳು ಮಾಧ್ಯಮಗಳ ಸುದ್ದಿ ಪ್ರಸಾರಕ್ಕೆ ಅಡ್ಡಿಯಾಗಬಹುದು ಎಂದು ಭಾರತೀಯ ಸಂಪಾದಕರ ಸಂಘ ಆಕ್ಷೇಪಿಸಿದೆ.

ಈ ಸಂದರ್ಭದಲ್ಲಿ ಮಾಧ್ಯಮಗಳನ್ನು ದೂಷಿಸುವುದರಿಂದ ಮಾಧ್ಯಮಗಳು ಮಾಡುತ್ತಿರುವ ಕಾರ್ಯಗಳನ್ನು ಹಾಳುಮಾಡಿದಂತಾಗುತ್ತದೆ ಎಂದು ಸಂಪಾದಕರ ಸಂಘ ನಿನ್ನೆ ಹೊರಡಿಸಿರುವ ಹೇಳಿಕೆಯಲ್ಲಿ ಆಕ್ಷೇಪಿಸಿದೆ.  

ಮಾಧ್ಯಮಗಳು ಕೊರೋನ ವೈರಸ್ ಸಾಂಕ್ರಾಮಿಕಕ್ಕೆ ಸಂಬಂಧಿಸಿದ ಬೆಳವಣಿಗೆಗಳ ಅಧಿಕೃತ ಆವೃತ್ತಿಯನ್ನು ಉಲ್ಲೇಖಿಸಿ ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂದು ಸಂಪಾದಕರ ಸಂಘ ತಿಳಿಸಿದೆ.

SCROLL FOR NEXT