ಕೋವಿಡ್ 19 ಸೋಂಕಿಗೆ ಲಸಿಕೆ ಕಂಡುಹಿಡಿಯುತ್ತಿರುವ ಹೈದರಾಬಾದ್ ನ ಭರತ್ ಬಯೊಟೆಕ್ ಕಂಪೆನಿ
ಕೋವಿಡ್-19 ವೈರಸ್ ಗುಣಪಡಿಸಲು ಹೈದರಾಬಾದ್ ಮೂಲದ ಲಸಿಕೆ ಉತ್ಪಾದನೆ ಕಂಪೆನಿ ಭರತ್ ಬಯೊಟೆಕ್ ಅಮೆರಿಕದ ವಿಸ್ಕೊನ್ಸಿನ್ ಮ್ಯಾಡಿಸನ್ ವಿಶ್ವವಿದ್ಯಾಲಯ ಮತ್ತು ಫ್ಲುಗೆನ್ ಎಂಬ ಮತ್ತೊಂದು ಲಸಿಕೆ ತಯಾರಿಕೆ ಕಂಪೆನಿ ಜೊತೆ ಸೇರಿ ಲಸಿಕೆ ತಯಾರಿಸಿ ಅಭಿವೃದ್ಧಿಪಡಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ.
ಹೈದರಾಬಾದ್: ಕೋವಿಡ್-19 ವೈರಸ್ ಗುಣಪಡಿಸಲು ಹೈದರಾಬಾದ್ ಮೂಲದ ಲಸಿಕೆ ಉತ್ಪಾದನೆ ಕಂಪೆನಿ ಭರತ್ ಬಯೊಟೆಕ್ ಅಮೆರಿಕದ ವಿಸ್ಕೊನ್ಸಿನ್ ಮ್ಯಾಡಿಸನ್ ವಿಶ್ವವಿದ್ಯಾಲಯ ಮತ್ತು ಫ್ಲುಗೆನ್ ಎಂಬ ಮತ್ತೊಂದು ಲಸಿಕೆ ತಯಾರಿಕೆ ಕಂಪೆನಿ ಜೊತೆ ಸೇರಿ ಲಸಿಕೆ ತಯಾರಿಸಿ ಅಭಿವೃದ್ಧಿಪಡಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ.
ಈ ಲಸಿಕೆಗೆ ಕೊರೊಫ್ಲು ಎಂದು ಹೆಸರಿಡಲಾಗಿದ್ದು ಈ ವರ್ಷಾಂತ್ಯಕ್ಕೆ ಮನುಷ್ಯನ ಮೇಲೆ ಪ್ರಯೋಗ ಮಾಡುವ ಹಂತಕ್ಕೆ ತಲುಪಲಿದೆ ಎಂದು ಭರತ್ ಬಯೊಟೆಕ್ ತಿಳಿಸಿದೆ. ಕಂಪೆನಿಯು ಲಸಿಕೆ ಉತ್ಪಾದಿಸಿ ಪ್ರಾಯೋಗಿಕ ಪರೀಕ್ಷೆ ನಡೆಸಿ ಜಾಗತಿಕ ಮಟ್ಟದಲ್ಲಿ ವಿತರಣೆಗೆ ಸುಮಾರು 300 ಮಿಲಿಯನ್ ಪ್ರಮಾಣದ ಲಸಿಕೆ ತಯಾರಿಸಲಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.