ಸಾಂದರ್ಭಿಕ ಚಿತ್ರ 
ದೇಶ

ಲಾಕ್ ಡೌನ್: ಸೋಡಾದೊಂದಿಗೆ ಆಫ್ಟರ್ ಶೇವ್ ಮಿಕ್ಸ್ ಮಾಡಿ ಕುಡಿದು ತಮಿಳುನಾಡಿನ ಇಬ್ಬರು ಮದ್ಯ ವ್ಯಸನಿಗಳು ಸಾವು

ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಲಾಗಿದ್ದು, ಮದ್ಯೆ ಸಿಗದ ಹಿನ್ನೆಲೆಯಲ್ಲಿ ಸೋಡಾದೊಂದಿಗೆ ಆಫ್ಟರ್ ಶೇವ್ ಮಿಕ್ಸ್ ಮಾಡಿ ಕುಡಿದು ಇಬ್ಬರು ವ್ಯಸನಿಗಳು ಮೃತಪಟ್ಟಿರುವ ದಾರುಣ ಘಟನೆ ತಮಿಳುನಾಡಿನ ಪುದುಕೋಟ್ಟೈನ ಕೋಟ್ಟೈಪಟ್ಟಣಂನಲ್ಲಿ ನಡೆದಿದೆ.

ಪುದುಕೋಟ್ಟೈ: ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಲಾಗಿದ್ದು, ಮದ್ಯೆ ಸಿಗದ ಹಿನ್ನೆಲೆಯಲ್ಲಿ ಸೋಡಾದೊಂದಿಗೆ ಆಫ್ಟರ್ ಶೇವ್ ಮಿಕ್ಸ್ ಮಾಡಿ ಕುಡಿದು ಇಬ್ಬರು ವ್ಯಸನಿಗಳು ಮೃತಪಟ್ಟಿರುವ ದಾರುಣ ಘಟನೆ ತಮಿಳುನಾಡಿನ ಪುದುಕೋಟ್ಟೈನ ಕೋಟ್ಟೈಪಟ್ಟಣಂನಲ್ಲಿ ನಡೆದಿದೆ.

ಮೃತರನ್ನು ರಾಮನಾತಪುರಂನ 27ವರ್ಷದ ಅರುಣ್ ಪಾಂಡಿಯನ್ ಮತ್ತು ಕೋಟ್ಟೈಪಟ್ಟಣಂನ 35 ವರ್ಷದ ಹಸನ್ ಮೈದೀನ್ ಎಂದು ಗುರುತಿಸಲಾಗಿದೆ. 

ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ 11 ದಿನಗಳಿಂದ ಮದ್ಯದ ಅಂಗಡಿಗಳು ಬಂದ್ ಆಗಿದ್ದು, ಕುಡಿಯಲು ಮದ್ಯ ಸಿಗದೆ ಪರದಾಡುತ್ತಿದ್ದ ಅರುಣ್ ಪಾಂಡಿಯನ್, ಹಸನ್ ಮೈದೀನ್ ಮತ್ತು ಅನ್ವರ್ ರಾಜಾ, ಮೂವರು ಶುಕ್ರವಾರ ರಾತ್ರಿ ಆಲ್ಕೋಹಾಲ್ ಬದಲಿಗೆ ಸೋಡಾದೊಂದಿಗೆ ಆಫ್ಟರ್ ಶೇವ್ ಲೋಷನ್ ಅನ್ನು ಮಿಕ್ಸ್ ಮಾಡಿ ಕುಡಿದಿದ್ದಾರೆ. ತಕ್ಷಣ ವಾಂತಿ ಮತ್ತು ತಲೆಸುತ್ತು ಬಂದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅರುಣ್ ಪಾಂಡಿಯನ್ ಮತ್ತು ಹಸನ್ ಮೈದೀನ್ ಅವರು ಮೃತಪಟ್ಟಿದ್ದಾರೆ. ಅನ್ವರ್ ರಾಜಾ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಈ ಸಂಬಂಧ ಕೋಟ್ಟೈಪಟ್ಟಣಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!