ದೇಶ

ಸಿಆರ್ ಪಿಎಫ್ ಮುಖ್ಯಸ್ಥರಿಗೂ ಅಂಟಿದ ಮಾರಕ ಕೊರೋನಾ ವೈರಸ್, ಸ್ವಯಂ ದಿಗ್ಭಂಧನ ಹೇರಿಕೊಂಡ ಎಪಿ ಮಹೇಶ್ವರಿ

Srinivasamurthy VN

ನವದೆಹಲಿ: ದೇಶಾದ್ಯಂತ ಮರಣ ಮೃದಂಗ ಮುಂದುವರೆಸಿರುವ ಮಾರಕ ಕೊರೋನಾ ವೈರಸ್ ಗೆ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ ಪಿಎಫ್) ಮುಖ್ಯಸ್ಥರೂ ಕೂಡ ತುತ್ತಾಗಿದ್ದು, ಸಿಆರ್ ಪಿಎಫ್ ಡಿಜಿ ಎಪಿ ಮಹೇಶ್ವರಿ ಅವರಿಕೆ ಸೋಂಕು ತಗುಲಿದ ಕಾರಣ ಅವರು ಸ್ವಯಂ  ದಿಗ್ಭಂಧನ ಹೇರಿಕೊಂಡಿದ್ದಾರೆ.

ಮೂಲಗಳ ಪ್ರಕಾರ ಸಿಆರ್ ಪಿಎಫ್ ಡಿಜಿ ಎಪಿ ಮಹೇಶ್ವರಿ ಮತ್ತು ಕೇಂದ್ರ ಸಚಿವ ಕೆ ವಿಜಯ್ ಕುಮಾರ್ ಅವರು ಇತ್ತೀಚಿಗೆ ನಕ್ಸಲ್ ಪೀಡಿತ ಛತ್ತೀಸ್ ಗಢಕ್ಕೆ ಭೇಟಿ ನೀಡಿದ್ದರು. ಈ ವೇಳೆ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದರು. ಈ ಇಬ್ಬರೊಂದಿಗೆ ಸುಮಾರು  24ಕ್ಕೂ ಅಧಿಕ ಮಂದಿ ಅಧಿಕಾರಿಗಳು ಸಭೆಯಲ್ಲಿ ಪಾಲ್ದೊಂಡಿದ್ದರು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಕೆ ವಿಜಯ್ ಕುಮಾರ್ ಸೇರಿದಂತೆ ಸಂಪರ್ಕದಲ್ಲಿದ್ದ 24ಕ್ಕೂ ಹೆಚ್ಚು ಅಧಿಕಾರಿಗಳನ್ನು ಗುರುತಿಸಿ, ಅವರ ಸಂಪರ್ಕದಲ್ಲಿದ್ದವರನ್ನೂ ಗುರುತಿಸಿ ಕ್ವಾರಂಟೈನ್ ಮಾಡಲಾಗಿದೆ.

ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಎಪಿ ಮಹೇಶ್ವರಿ ಅವರು ತಮಗೆ ಕೊರೋನಾ ವೈರಸ್ ಸೋಂಕು ತಗುಲಿದ್ದು, ಈ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ. ಹೀಗಾಗಿ ತಾವು ಮುಂಜಾಗ್ರತಾ ಕ್ರಮವಾಗಿ ಸ್ವಯಂ ದಿಗ್ಭಂಧನದಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ.

SCROLL FOR NEXT