ದೇಶ

ಹಣಕಾಸು ಸಚಿವಾಲಯ, ಪಿಎಸ್ ಯು ಸಿಬ್ಬಂದಿಯಿಂದ ಪಿಎಂ ಕೇರ್ ಫಂಡ್ ಗೆ 430 ಕೋಟಿ ರೂ. ನೆರವು

Srinivasamurthy VN

ನವದೆಹಲಿ: ಕೋವಿಡ್ -19 ವಿರುದ್ಧದ ಹೋರಾಟಕ್ಕೆ ಕೈಜೋಡಿಸಿರುವ ಹಣಕಾಸು ಸಚಿವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಒಟ್ಟಾಗಿ 430.13 ಕೋಟಿ ರೂ. ನೆರವನ್ನು ಪಿಎಂಕೇರ್ ಗೆ ನೀಡಿದ್ದಾರೆ.

ಇದರಲ್ಲಿ ಎಸ್ ಬಿಐ ಉದ್ಯೋಗಿಗಳ 100 ಕೋಟಿ ರೂ., ಪಂಜಾಬ್ ನ್ಯಾಷನಲ್ ಬ್ಯಾಂಕ್ ಉದ್ಯೋಗಿಗಳು 15 ಕೋಟಿ ರೂ., ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ನಿಂದ 105 ಕೋಟಿ ರೂ., ಇಂಡಿಯಾ ಇನ್ ಫ್ರಾಸ್ಟ್ರಕ್ಚರ್ ಫೈನಾನ್ಸ್ ಕಂಪನಿ ಲಿಮಿಟೆಡ್ ಗೆ 25 ಕೋಟಿ ರೂ. ನೆರವನ್ನು  ಒಳಗೊಂಡಿದೆ.

ಅಂತೆಯೇ ಬ್ಯಾಂಕ್ ನೌಕರರು, ವಿತ್ತೀಯ ವಲಯದ ಸಂಸ್ಥೆಗಳ ನೌಕರರು ತಮ್ಮ ಒಂದು ದಿನದ ವೇತವನ್ನು ಪ್ರಧಾನಿ ಕೇರ್ಸ್ ಫಂಡ್ ಗೆ ದೇಣಿಗೆಯಾಗಿ ನೀಡಿದ್ದಾರೆ. ಇನ್ನು ಸರ್ಕಾರಿ ಸ್ವಾಮ್ಯದ ವಿಮಾನ ಕಂಪನಿ ಎಲ್ ಐಸಿ 105 ಕೋಟಿ ರೂ ದೇಣಿಗೆ ನೀಡಿದ್ದು, ಎಸ್ ಬಿಐ ನೌಕರರು 100  ಕೋಟಿ ರೂ ದೇಣಿಗೆ ನೀಡಿದ್ದಾರೆ.

ಇಂಡಿಯಾ ಇನ್ಫ್ರಾಸ್ಟ್ರಕ್ಚರ್ ಫೈನಾನ್ಸ್ ಕಂಪನಿ ಲಿಮಿಟೆಡ್ ಸಂಸ್ಥೆಯ ಉದ್ಯೋಗಿಗಳಿಂದ 25 ಕೋಟಿ ರೂ., ಸಿಬಿಐಸಿ ಮತ್ತು ಸಿಬಿಡಿಟಿಯ ನೌಕರರಿಂದ 23 ಕೋಟಿ ರೂ., ಜನರಲ್ ಇನ್ಶುರೆನ್ಸ್ ಕಂಪನಿಯಿಂದ 23.81 ರೂ., ಸಿಡಿ ಬಿಐ, ಕೆನರಾ ಬ್ಯಾಂಕ್  ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ತಲಾ 15 ಕೋಟಿ ರೂ. ಆರ್ಥಿಕ ವ್ಯವಹಾರಗಳ ಇಲಾಖೆ, ಖರ್ಚು ಇಲಾಖೆ, ಸೆಬಿ, ಮತ್ತು ಕಂದಾಯ ಇಲಾಖೆಯ ನೌಕರರ ಕೊಡುಗೆ ಕ್ರಮವಾಗಿ 15 ಲಕ್ಷ, 9 ಲಕ್ಷ, 50 ಲಕ್ಷ, ಮತ್ತು 2 ಕೋಟಿ ರೂ ದೇಣಿಗೆ ನೀಡಿದ್ದಾರೆ ಎಂದು ಹಣಕಾಸು ಸಚಿವಾಲಯ  ಮಾಹಿತಿ ನೀಡಿದೆ.

ಪ್ರಧಾನ ಮಂತ್ರಿಗಳ ನಾಗರಿಕ ನೆರವು ಮತ್ತು ಪರಿಹಾರದ ನಿಧಿಯನ್ನು ಮಾರ್ಚ್ 28ರಂದು ರಚಿಸಲಾಗಿತ್ತು. ಇದು ದೇಶದ ತುರ್ತು ಹಾಗೂ ಆಘಾತಕಾರಿ ಪರಿಸ್ಥಿತಿಯಲ್ಲಿ ಪೀಡಿತ ಜನರ ನೆರವಿಗೆ ಬಳಸಲಾಗುತ್ತದೆ.
 

SCROLL FOR NEXT