ಕ್ರಿಶ್ಚಿಯನ್ ಮೈಕೆಲ್ 
ದೇಶ

ಅಗಾಸ್ಟಾ ವೆಸ್ಟ್ ಲ್ಯಾಂಡ್ ಕೇಸ್: ಕ್ರಿಶ್ಚಿಯನ್ ಮೈಕೆಲ್ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ 

ಅಗಾಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಚಾಪರ್ ಹಗರಣ ಪ್ರಕರಣದಲ್ಲಿ ಮಧ್ಯವರ್ತಿಯಾಗಿದ್ದ ಕ್ರಿಶ್ಚಿಯನ್ ಮೈಕೆಲ್ ಪಾಲಿಗೆ ಜೈಲುವಾಸವೇ ಗಟ್ಟಿಯಾಗಿದೆ. ಜೈಲಿನಲ್ಲಿ ಕೊರೋನಾವೈರಸ್ ಸೋಂಕಿಗೆ ಒಳಗಾಗುವ ಭೀತಿಯಿಂದ ಜಾಮೀನು ನೀಡಬೇಕೆಂದು ಕ್ರಿಶ್ಚಿಯನ್ ಮೈಕೆಲ್ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು  ದೆಹಲಿ ಹೈಕೋರ್ಟ್ ಮಂಗಳವಾರ ವಜಾ ಮಾಡಿದೆ. 

ನವದೆಹಲಿ: ಅಗಾಸ್ಟಾವೆಸ್ಟ್ ಲ್ಯಾಂಡ್ ವಿವಿಐಪಿ ಚಾಪರ್ ಹಗರಣ ಪ್ರಕರಣದಲ್ಲಿ ಮಧ್ಯವರ್ತಿಯಾಗಿದ್ದ ಕ್ರಿಶ್ಚಿಯನ್ ಮೈಕೆಲ್ ಪಾಲಿಗೆ ಜೈಲುವಾಸವೇ ಗಟ್ಟಿಯಾಗಿದೆ. ಜೈಲಿನಲ್ಲಿ ಕೊರೋನಾವೈರಸ್ ಸೋಂಕಿಗೆ ಒಳಗಾಗುವ ಭೀತಿಯಿಂದ ಜಾಮೀನು ನೀಡಬೇಕೆಂದು ಕ್ರಿಶ್ಚಿಯನ್ ಮೈಕೆಲ್ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು  ದೆಹಲಿ ಹೈಕೋರ್ಟ್ ಮಂಗಳವಾರ ವಜಾ ಮಾಡಿದೆ. 

ನ್ಯಾಯಮೂರ್ತಿ ಮುಕ್ತಾ ಗುಪ್ತಾ ಜಾಮೀನು ವಜಾಗೊಳಿಸಿ ಕೊರೋನಾ ಸೋಂಕಿನ ಭೀತಿ ಆಧಾರರಹಿತವಾಗಿದೆ.  ಏಕೆಂದರೆ ಆರೋಪಿ ಕೇವಲ ಇಬ್ಬರು ಕೈದಿಗಳೊಂದಿಗೆ ಪ್ರತ್ಯೇಕ ಕೋಣೆಯಲ್ಲಿ ವಾಸಿಸುತ್ತಾರೆ ಹೊರತು ಆದ್ದರಿಂದ, ಹಲವಾರು ಕಾರಾಗೃಹಗಳು ಇರುವ ಬ್ಯಾರಕ್ ಅಥವಾ ವಸತಿ ನಿಲಯದಲ್ಲಿಲ್ಲ ಎಂದರು.

ಅರ್ಜಿದಾರರ ಜೊತೆ ವಾಸಿಸುತ್ತಿರುವ ಇಬ್ಬರು ಕೈದಿಗಳಲ್ಲಿ ಯಾರಾದರೂ ಕೋವಿಡ್ ರೋಗದ ಸೋಂಕಿನಿಂದ ಬಳಲುತ್ತಿದ್ದಾರೆಯೆ ಎಂದು ನ್ಯಾಯಾಲಯ ಪ್ರಶ್ನಿಸಿದೆ. 

ಕೊರೋನಾವೈರಸ್ ಭಯದ ನಡುವೆ ರಾಷ್ಟ್ರ ರಾಜಧಾನಿಯಲ್ಲಿನ ಕಾರಾಗೃಹಗಳನ್ನು ಖೈದಿಗಳ ದಟ್ಟಣೆಯಿಂದ ಮುಕ್ತವಾಗಿಸಲು ಸ್ಥಾಪಿಸಲಾದ ಹೈ ಪವರ್ ಕಮಿಟಿ ನಿಗದಿಪಡಿಸಿದ ಮೂರು ಮಾನದಂಡಗಳಿಗೆ ಅರ್ಹತೆ ಪಡೆಯಲು ಅರ್ಜಿದಾರರು ವಿಫಲರಾಗಿದ್ದಾರೆ ಹಾಗಾಗಿ ಜಾಮೀನಿನ ಮೇಲೆ ಬಿಡುಗಡೆ ಸಾಧ್ಯವಿಲ್ಲ, ವಿದೇಶಿ ಪ್ರಜೆಗಳು, ಒಂದಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿರುವವರಿಗೆ  ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಮನಿ ಲಾಂಡರಿಂಗ್ ತಡೆ ಕಾಯ್ದೆಯಡಿ ಇರುವ ಪ್ರಕರಣಗಳಲ್ಲಿ ಜಾಮೀನು ಕೊಡದಿರಲು ತೀರ್ಮಾನಿಸಲಾಗಿದೆ.

ಇದಕ್ಕೆ ಮುನ್ನ ಸಿಬಿಐ ಪರ ಹಾಜರಾದ ವಕೀಲ ಡಿ.ಪಿ.ಸಿಂಗ್, ಇಡಿ ಪರ ಹಾಜರಾದ ವಕೀಲ ಅಮಿತ್ ಮಹಾಜನ್ ಜಾಮೀನು ಅರ್ಜಿಯನ್ನು  ವಿರೋಧಿಸಿದ್ದರು. ಅರ್ಜಿದಾರರು ಯಾವುದೇ ಕೊರೋನಾ ಸೋಂಕಿತರ ಸಂಪರ್ಕಕ್ಕೆ ಬರುವ ಭಯವಿಲ್ಲ. ಆ ಮೂಲಕ, ಅವರ ವಯಸ್ಸಿನಿಂದಾಗಿ ಮತ್ತು ಬ್ರಿಟಿಷ್ ಪ್ರಜೆಯಾಗಿರುವುದರಿಂದ, ಭಾರತೀಯ ಪರಿಸ್ಥಿತಿಗಳಿಗೆ ಒಗ್ಗಿಕೊಂಡಿಲ್ಲ,  ಎಂಬ ವಾದ ಸತ್ಯಕ್ಕೆ ದೂರವಾಗಿದೆ ಎಂದರು. ಮೈಕೆಲ್, ತನ್ನ ಮನವಿಯಲ್ಲಿ, ವಕೀಲ ಅಲ್ಜೊ ಕೆ ಜೋಸೆಫ್ ಅವರ ಮೂಲಕ, ಅವರ ವಯಸ್ಸು ಮತ್ತು ಆರೋಗ್ಯ ಸ್ಥಿತಿಯು ಕೊರೋನಾವೈರಸ್ ಸೋಂಕಿಗೆ ಒಳಗಾಗುವ ಅಪಾಯದಿಂದ ಕೂಡಿದೆ ಎಂದಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ: ಕಣ್ಣೀರಿಟ್ಟ CM ಕಚೇರಿ ಸಿಬ್ಬಂದಿ; ಬೆಂಬಲಿಗರಿಂದ ಪ್ರತಿಭಟನೆ

IPL 2026 Eliminator: SRH ವಿರುದ್ಧ ವೈಭವ್ ಸೂರ್ಯವಂಶಿ ಸಿಕ್ಸರ್ ಸುರಿಮಳೆ, 14 ವರ್ಷ ಹಳೆಯ Chris gayle ದಾಖಲೆ ಧೂಳಿಪಟ

SCROLL FOR NEXT