ದೇಶ

ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಂ ವಿರೋಧಿ ಪೋಸ್ಟ್: ಪ್ರಧಾನಿ ಮೋದಿ ಮೊರೆ ಹೋದ ಸಮುದಾಯದ ನಾಯಕರು! 

Srinivas Rao BV

ನವದೆಹಲಿ: ಕೊರೋನಾ ಭೀತಿ, ಲಾಕ್ ಡೌನ್ ನಡುವೆಯೂ ತಬ್ಲಿಘಿ ಮರ್ಕಜ್ ನಲ್ಲಿ ಭಾಗವಹಿಸಿದವರ ನಡೆಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ. ತಬ್ಲಿಘಿಗಳ ನಡೆಯನ್ನು ಪ್ರಶ್ನಿಸಿ, ಟೀಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕೆ ಪೋಸ್ಟ್ ಗಳು ಹಂಚಿಕೆಯಾಗುತ್ತಿದ್ದು, ಮುಸ್ಲಿಂ ಮುಖಂಡರು ಪ್ರಧಾನಿ ನರೇಂದ್ರ ಮೋದಿ ಮೊರೆ ಹೋಗಿದ್ದಾರೆ. 

ಮುಸ್ಲಿಂ ಸಂಘಟನೆಗಳ ಒಕ್ಕೂಟ ಅಖಿಲ ಭಾರತ ಮುಸ್ಲಿಂ ಮಜ್ಲಿಸ್-ಎ-ಮುಷಾವರತ್ ಮುಖ್ಯಸ್ಥ ನವೀದ್ ಹಮೀದ್, ಈ ಬಗ್ಗೆ ಮಾತನಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕೊರೋನಾ ವೈರಸ್ ಗೆ ಸಂಬಂಧಿಸಿದಂತೆ ಮುಸ್ಲಿಮರ ವಿರುದ್ಧ ದ್ವೇಷ ಹರಡಲಾಗುತ್ತಿದೆ. ಟಿಕ್ ಟಾಅಕ್ ನಲ್ಲಿ 30 ಸಾವಿರ ಕನಲಿ ವಿಡಿಯೋಗಳನ್ನು ಮಾಡಲಾಗಿದ್ದು, ಮುಸ್ಲಿಮರು ಕೊರೋನಾ ವೈರಸ್ ನ್ನು ದೇಶಾದ್ಯಂತ ಹರಡುತ್ತಿದ್ದಾರೆ ಎಂದು ದ್ವೇಷ ಮೂಡಿಸಲಾಗುತ್ತಿದೆ. ಇದನ್ನು ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. 

ದಕ್ಷಿಣ ಭಾರತದ ಎಲ್ಲಾ ಮುಖ್ಯಮಂತ್ರಿಗಳೂ ಕೊರೋನಾಗೆ ಸಂಬಂಧಿಸಿದಂತೆ ಮುಸ್ಲಿಮರ ವಿರುದ್ಧ ದ್ವೇಷ ಮೂಡಿಸುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಕೇಂದ್ರ ಸರ್ಕಾರವೂ ಈ ಬಗ್ಗೆ ಭರವಸೆ ನೀಡಿದೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗುತ್ತಿರುವ ಪೋಸ್ಟ್ ಗಳು ಸಮುದಾಯಗಳ ನಡುವೆ ದ್ವೇಷ ಮೂಡಿಸುತ್ತವೆ ಆದ್ದರಿಂದ ಪ್ರಧಾನಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು  ಭಾರತ ಮುಸ್ಲಿಂ ಮಜ್ಲಿಸ್-ಎ-ಮುಷಾವರತ್ ಮುಖ್ಯಸ್ಥ ನವೀದ್ ಹಮೀದ್ ಮನವಿ ಮಾಡಿದ್ದಾರೆ.

SCROLL FOR NEXT