ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಕ್ವಾರಂಟೈನ್ ನಲ್ಲಿರುವವರ ಕಣ್ಗಾವಲಿಗೆ ಬೆಂಗಳೂರು,ತುಮಕೂರಿನಲ್ಲಿ ಸ್ಮಾರ್ಟ್ ತಂತ್ರಜ್ಞಾನ-ಲವ ಅಗರ್ ವಾಲ್

ಬೆಂಗಳೂರು, ತುಮಕೂರಿನಲ್ಲಿ ಕ್ವಾರಂಟೈನ್ ಮೇಲೆ ಕಣ್ಗಾವಲು ಹಾಕುವ, ಅವರ ಚಟುವಟಿಕೆಗಳನ್ನು ಸಮಗ್ರವಾಗಿ ಪರಿಶೀಲಿಸುವ ಸ್ಮಾರ್ಟ್ ತಂತ್ರಜ್ಞಾನವನ್ನು ಅಳವಡಿಸಿಕೊಂಡು ದೇಶಕ್ಕೆ ಮಾದರಿಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿ ಕಾರ್ಯದರ್ಶಿ ಲವ ಅಗರ್ ವಾಲ್ ಹೇಳಿದ್ದಾರೆ

ಲವ ಅಗರ್ ವಾಲ್
Nagaraja AB
Updated On : 7 Apr 2020, 7:15 pm

ನವದೆಹಲಿ:ಕೋವಿಡ್ - 19 ಸೋಂಕು ನಿಯಂತ್ರಣ ಕ್ರಮಗಳ ಅಂಗವಾಗಿ ಬೆಂಗಳೂರು ಮತ್ತು ತುಮಕೂರು ನಗರಗಳು ಮಾದರಿಯಾಗಿದ್ದು, ಸ್ಮಾರ್ಟ್ ಸಿಟಿ ಅಭಿಯಾನದಡಿ ಕ್ವಾರಂಟೈನ್ ಮೇಲೆ ಕಣ್ಗಾವಲು ಹಾಕುವ, ಅವರ ಚಟುವಟಿಕೆಗಳನ್ನು ಸಮಗ್ರವಾಗಿ ಪರಿಶೀಲಿಸುವ ಸ್ಮಾರ್ಟ್ ತಂತ್ರಜ್ಞಾನವನ್ನು  ಅಳವಡಿಸಿಕೊಂಡು ದೇಶಕ್ಕೆ ಮಾದರಿಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿ ಕಾರ್ಯದರ್ಶಿ ಲವ ಅಗರ್ ವಾಲ್ ಹೇಳಿದ್ದಾರೆ

ದೈನಂದಿನ ಸುದ್ದಿಗೋಷ್ಠಿಯಲ್ಲಿ ಅವರು, ಸ್ಮಾರ್ಟ್ ಸಿಟಿ ಯೋಜನೆಗೆ ಒಳಪಡುವ ಸೂರತ್ ಮತ್ತು ಪುಣೆ ನಗರಗಳು ಸಹ ಇದೇ ತಂತ್ರಜ್ಞಾನವನ್ನು ಅಡಕಗೊಳಿಸಿಕೊಂಡಿವೆ. ಹೋಮ್ ಕ್ವಾರಂಟೇನ್ ನಲ್ಲಿರುವವರ ನಿರ್ವಹಣೆ, ನಿಗಾ, ಪತ್ತೆ ಹಚ್ಚುವ, ಮಾಹಿತಿ ಪ್ರಸರಣ, ತರಬೇತಿ ನೀಡುವ, ವಿಶ್ಲೇಷಣೆ ಮಾಡುವ, ಕೌನ್ಸಿಲಿಂಗ್ ಸೌಲಭ್ಯ ಮತ್ತಿತರ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ದಿಗ್ಭಂಧನದಲ್ಲಿರುವವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಕೋವಿಡ್ 19 ಪ್ರಕರಣಗಳನ್ನು ದೇಶದಲ್ಲಿ ಮೂರು ಹಂತಗಳನ್ನಾಗಿ ವಿಂಗಡಿಸಲಾಗಿದೆ. ವಸತಿ ನಿಲಯಗಳು, ಕ್ರೀಡಾಂಗಣಗಳಂತಹ ಪ್ರದೇಶಗಳಲ್ಲಿ  ಮೊದಲ ಹಂತದ ಪ್ರಕರಣಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ಎರಡನೇ ಹಂತದ ಕೇಂದ್ರಗಳು ಸಂಪೂರ್ಣವಾಗಿ ಉನ್ನತ ಚಿಕಿತ್ಸೆಗೆ ಮೀಸಲಾಗಿದ್ದು,  ಇದಕ್ಕಾಗಿ. ಆಸ್ಪತ್ರೆಗಳನ್ನು ಮೀಸಲಿಡಲಾಗಿದೆ. ತೀವ್ರ ಸಂಕಿರ್ಣ ಪರಿಸ್ಥಿತಿಯಲ್ಲಿರುವವರಿಗೆ ವೆಂಟಿಲೇಟರ್ ಸೇರಿದಂತೆ ಉನ್ನತ ತಂತ್ರಜ್ಞಾನದ ಮೂಲಕ ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದು ಲವ ಅಗರ್ ವಾಲ್ ಸ್ಪಷ್ಟಪಡಿಸಿದರು. 

Advertisement

Advertisement

ಎನ್ 95 ಮಾಸ್ಕ್ ಗಳು ಸೇರಿದಂತೆ ವೈದ್ಯಕೀಯ ಪರಿಕರಗಳಿಗೆ ಗುಣಮಟ್ಟ ನಿಗದಿಪಡಿಸಿದ್ದು, ಯಾವುದೇ ದೇಶ, ಯಾವುದೇ ಭಾಗದಿಂದ ಇವುಗಳನ್ನು ಖರೀದಿ ಅಥವಾ ಆಮದು ಮಾಡಿಕೊಂಡರೂ ಗುಣಮಟ್ಟಕ್ಕೆ ಆದ್ಯತೆ ನೀಡಲಾಗುವುದು ಎಂದರು

ಕೇಂದ್ರ ಗೃಹ ಇಲಾಖೆ ಜಂಟಿ ಕಾರ್ಯದರ್ಶಿ ಪುಣ್ಯ ಸಲಿಲ ಶ್ರೀವಾತ್ಸವ್ ಮಾತನಾಡಿ, ಲಾಕ್ ಡೌನ್ ಪಾಲನೆಗೆ ಎಲ್ಲರ ಸಹಕಾರ ಅಗತ್ಯವಾಗಿದ್ದು, ಟ್ರಕ್ ಗಳ ಮೂಲಕ ಔಷಧಗಳನ್ನು ಸಾಗಾಟ ಮಾಡಲಾಗುತ್ತಿದೆ. ಈವರೆಗೆ 152 ವಿಮಾನಗಳನ್ನು ಇದಕ್ಕಾಗಿ ಬಳಕೆ ಮಾಡಿಕೊಳ್ಳಲಾಗಿದೆ. ಕಾಳಸಂತೆಕೋರರ ಸಮಸ್ಯೆ ನಿಯಂತ್ರಿಸುವಂತೆಯೂ ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ ಎಂದರು

ಐಸಿಎಂಆರ್ ನ ಪ್ರಧಾನ ವಿಜ್ಞಾನಿ ಡಾ. ಗಂಗಾಖೇಡ್ಕರ್ ಮಾತನಾಡಿ, ಸರ್ಕಾರಿ ಮತ್ತು ಖಾಸಗಿ ಪ್ರಯೋಗಾಲಯಗಳ ಮೂಲಕ ಒಂದು ಲಕ್ಷ ಮಾದರಿಗಳನ್ನು ಈವರೆಗೆ ಪರೀಕ್ಷೆಗಳನ್ನು ನಡೆಸಲಾಗಿದೆ. ಸೋಂಕು ಪತ್ತೆಗೆ ಖಾಸಗಿ ಮತ್ತು ಸಾರ್ವಜನಿಕ ವಲಯದಿಂದ ಹೆಚ್ಚು ಪ್ರಯೋಗಾಲಯಗಳನ್ನು ತೆರೆಯಲಾಗುತ್ತಿದೆ ಎಂದು ಮಾಹಿತಿ ನೀಡಿದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement