ದೇಶ

ಉತ್ತರ ಪ್ರದೇಶದ 15 ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್ ಡೌನ್, ಯಾವುದಕ್ಕೂ ಹೊರ ಬರುವಂತಿಲ್ಲ!

Lingaraj Badiger

ಲಖನೌ: ಉತ್ತರ ಪ್ರದೇಶದಲ್ಲಿ ಮಹಾಮಾರಿ ಕೊರೋನಾ ವೈರಸ್‌ ವ್ಯಾಪಕವಾಗಿ ಹರಡುತ್ತಿರುವುದನ್ನು ತಡೆಯುವುದಕ್ಕಾಗಿ  ಯೋಗಿ ಆದಿತ್ಯನಾಥ್ ಸರ್ಕಾರ ಕಠಿಣ ಕ್ರಮ ತೆಗೆದುಕೊಂಡಿದ್ದು, ರಾಜ್ಯದ 15 ಜಿಲ್ಲೆಗಳಲ್ಲಿ ಬುಧವಾರದಿಂದ ಸಂಪೂರ್ಣ ದಿಗ್ಬಂಧನ ವಿಧಿಸಿದ್ದಾರೆ.

ಲಖನೌ, ನೋಯ್ಡಾ, ಘಾಜಿಯಾಬಾದ್, ಮೀರತ್, ಆಗ್ರ, ಶಾಮ್ಲಿ, ಸಹರನಾಪುರ್ ಸೇರಿದಂತೆ 15 ಜಿಲ್ಲೆಗಳಲ್ಲಿ ಸಂಪೂರ್ಣ ಲಾಡ್ ಡೌನ್ ಘೋಷಿಸಲಾಗಿದ್ದು, ಅಗತ್ಯ ವಸ್ತುಗಳಿಗೂ ಜನ ಮನೆಯಿಂದ ಹೊರ ಬರುವಂತಿಲ್ಲ ಎಂದು ಆದೇಶಿಸಿದೆ.

15 ಜಿಲ್ಲೆಗಳಲ್ಲಿ ಏಪ್ರಿಲ್‌ 15ರ ವರೆಗೂ ಸಂಪೂರ್ಣ ಲಾಕ್‌ಡೌನ್‌ ಘೋಷಣೆಯಾಗಿದ್ದು, ಜನರು ದಿನಸಿ ಹಾಗೂ ತರಕಾರಿ ಖರೀದಿಗೂ ಮನೆಯಿಂದ ಹೊರಬರುವುದನ್ನು ನಿರ್ಬಂಧಿಸಲಾಗಿದೆ. ಕುಟುಂಬಕ್ಕೆ ಅವಶ್ಯವಿರುವ ಆಹಾರ ಪದಾರ್ಥಗಳು ಸೇರಿದಂತೆ ಅತ್ಯಗತ್ಯ ವಸ್ತುಗಳನ್ನು ಶೇ. 100ರಷ್ಟು ಮನೆಯ ಬಾಗಿಲಿಗೇ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ.

ಅಗತ್ಯ ಸಾಮಗ್ರಿಗಳ ಹೋಂ ಡೆಲಿವರಿಗೆ ಹಾಗೂ ವೈದ್ಯಕೀಯ ತಂಡಗಳಿಗೆ ಮಾತ್ರ ಈ ಜಿಲ್ಲೆಗಳಲ್ಲಿ ಸಂಚರಿಸಲು ಅವಕಾಶ ನೀಡಲಾಗಿದೆ. ಕೋವಿಡ್‌–19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಸೋಂಕು ಸಮುದಾಯಗಳಿಗೆ ವ್ಯಾಪಿಸುವುದನ್ನು ನಿಯಂತ್ರಿಸಲು ಈ ಕ್ರಮ ವಹಿಸಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಆರ್‌.ಕೆ.ತಿವಾರಿ ಹೇಳಿದ್ದಾರೆ. 

SCROLL FOR NEXT