ದೇಶ

ಬಿಡುಗಡೆಯಾದ ಕೈದಿಗಳು ಮನೆ ತಲುಪಲು ವ್ಯವಸ್ಥೆ ಮಾಡಿ: ಸುಪ್ರೀಂ ಕೋರ್ಟ್

Shilpa D

ನವದೆಹಲಿ: ಕರೋನ ಹಿನ್ನಲೆಯಲ್ಲಿ ದೇಶಾದ್ಯಂತ ಲಾಕ್ಡೌನ್ ಜಾರಿಯಲ್ಲಿ ಇರುವುದರಿಂದ ಜೈಲಿನಿಂದ ಬಿಡುಗಡೆಯಾದ ಕೈದಿಗಳು ಸುಲಲಿತವಾಗಿ ಮನೆ ಸೇರಲು ವ್ಯವಸ್ಥೆ ಅಗತ್ಯ ಸಾರಿಗೆ ವ್ಯಸಸ್ಥೆ ಮಾಡುವಂತೆ ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ಮಹಾ ನಿರ್ದೇಶಕರಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ . 

ನ್ಯಾಯಾಲಯ ನೇಮಕ ಮಾಡಿರುವ ಅಮಿಕಸ್ ಕ್ಯೂರಿ ಮತ್ತು ಹಿರಿಯ ವಕೀಲ ದುಶ್ಯಂತ್ ದೇವ್ ಅವರು ಬಿಡುಗಡೆಯಾದ ಕೈದಿಗಳು ತಮ್ಮ ಮನೆಗಳನ್ನು ತಲುಪಲು ಯಾವುದೇ ವಾಹನ ಸೌಲಭ್ಯ ವಿಲ್ಲದ ಕಾರಣ ತೊಂದರೆಗೆ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ನ್ಯಾಯಾಲಯದ ಗಮನ ಸೆಳೆದರು. 

"ಲಾಕ್ ಡೌನ್ ಸಂದರ್ಭದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಬಿಡುಗಡೆಯಾದ ಎಲ್ಲಾ ಕೈದಿಗಳು ಸಿಕ್ಕಿಹಾಕಿಕೊಳ್ಳದಂತೆ ನೋಡಿಕೊಳ್ಳಬೇಕೆಂದು ಕೇಂದ್ರ ಸರಕಾರಕ್ಕೆ ನಿರ್ದೇಶಿಸುವುದು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ, ಎಲ್.ಎ.ನಾಗೇಶ್ವರ ರಾವ್ ನೇತೃತ್ವದ ನ್ಯಾಯಪೀಠ ತಿಳಿಸಿದೆ.

ಲಾಕ್ ಡೌನ್ ಸಮಯದಲ್ಲಿ ರಾಜ್ಯಗಳು ಕೇಂದ್ರಾಡಳಿತ ಪ್ರದೇಶಗಳಿಂದ ಬಿಡುಗಡೆಯಾದ ಕೈದಿಗಳು ಯಾವ ತೊಂದರೆಯಿಲ್ಲದೆ ಮನೆಗೆ ಹೋಗಲು ಸುರಕ್ಷಿತ ಸಾರಿಗೆ ವ್ಯವಸ್ಥೆ ಒದಗಿಸಲು ಪೊಲೀಸ್ ಮಹಾನಿರ್ದೇಶಕರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದೂ ನ್ಯಾಯ ಪೀಠ ನಿರ್ದೇಶನ ನೀಡಿದೆ.

SCROLL FOR NEXT