ದೇಶ

ಲಾಕ್ ಡೌನ್ ಎಫೆಕ್ಟ್; ಭಾರತದಲ್ಲಿ ಇಂಧನ ಬಳಕೆಯಲ್ಲಿ ಶೇ.18ರಷ್ಟು ಕುಸಿತ

Srinivasamurthy VN

ನವದೆಹಲಿ: ಮಾರಕ ಕೊರೋನಾ ವೈರಸ್ ನಿಂದಾಗಿ ಭಾರತದಲ್ಲಿ ಹೇರಲಾಗಿರುವ ಲಾಕ್ ಡೌನ್ ನಿಂದಾಗಿ ದೇಶದಲ್ಲಿ ಇಂಧನ ಬಳಕೆಯಲ್ಲಿ ಶೇ.18ರಷ್ಚು ಕುಸಿತವಾಗಿದೆ ಎಂದು ತಿಳಿದುಬಂದಿದೆ.

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು 21 ಲಾಕ್ ಡೌನ್ ಘೋಷಣೆ ಮಾಡುತ್ತಿದ್ದಂತೆಯೇ ದೇಶಾದ್ಯಂತ ಎಲ್ಲ ರೀತಿಯ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿತ್ತು. ಪ್ರಮುಖವಾಗಿ ಸಾರಿಗೆ ವಲಯ ಸಂಪೂರ್ಣವಾಗಿ ಸ್ಥಬ್ಧವಾಗಿತ್ತು. ಹಣ್ಣು, ತರಕಾರಿ, ದಿನಸಿ ವಸ್ತುಗಳಂತ ಅಗತ್ಯ  ವಸ್ತುಗಳ ರವಾನಿಸುತ್ತಿದ್ದ ವಾಹನಗಳಿಗೆ ಮಾತ್ರ ಸರ್ಕಾರ ಅನುಮತಿ ನೀಡಿತ್ತು. ಹೀಗಾಗಿ ಇಂಧನ ಬಳಕೆಯ ಗಣನೀಯ ಪ್ರಮಾಣದಲ್ಲಿ ಕುಸಿದಿತ್ತು. 

ವರದಿಗಳ ಪ್ರಕಾರ ದೇಶದಲ್ಲಿ ಪೆಟ್ರೋಲ್ ಬಳಕೆಯಲ್ಲಿ ಶೇ,17.79 ರಷ್ಚು ಕುಸಿತ ಕಂಡುಬಂದಿದ್ದು, ಮಾರ್ಚ್ ತಿಂಗಳಲ್ಲಿ 16.08 ಮಿಲಿಯನ್ ಟನ್ ಬಳಕೆ ಮಾಡಿದೆ. ಇನ್ನು ದೇಶದಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಬಳಕೆಯಾಗುವ ಡೀಸೆಲ್ ಬಳಕೆ ಪ್ರಮಾಣದಲ್ಲೂ ಗಣನೀಯ ಇಳಿಕೆಯಾಗಿದೆ.  ಡೀಸೆಲ್ ಬಳಕೆಯಲ್ಲಿ ಶೇ.24.23ರಷ್ಟು ಕುಸಿದಿದ್ದು, 5.65 ಮಿಲಿಯನ್ ಟನ್ ಡೀಸೆಲ್ ಮಾತ್ರ ಬಳಕೆಯಾಗಿದೆ.

ಪ್ರಮುಖವಾಗಿ ಲಾಕ್ ಡೌನ್ ಪರಿಣಾಮ ವಿಮಾನಯಾನ ಕ್ಷೇತ್ರ ಸ್ಥಬ್ಧವಾಗಿದ್ದು, ವಿಮಾನಗಳಲ್ಲಿ, ರೈಲುಗಳಲ್ಲಿ ಬಳಸುವ ಇಂಧನ ಬಳಕೆಯಲ್ಲೂ ಭಾರಿ ಪ್ರಮಾಣದ ಕುಸಿತ ಕಂಡುಬಂದಿದೆ. ಪೆಟ್ರೋಲ್ ಮಾರಾಟದಲ್ಲೂ ಭಾರಿ ಪ್ರಮಾಣದ ಕುಸಿತ ಕಂಡುಬಂದಿದ್ದು, ಶೇ.16.37ರಷ್ಟು ಕುಸಿದಿದೆ.  2.15 ಮಿಲಿಯನ್ ಟನ್ ಪೆಟ್ರೋಲ್ ಮಾರಾಟವಾಗಿದೆ ಎಂದು ತಿಳಿದುಬಂದಿದೆ.

SCROLL FOR NEXT